ಗಾಜನೂರಿನ  ದೊಡ್ಮನೆಯಲ್ಲಿ  ಮದುವೆ  ಸಂಭ್ರಮ  

ಗಾಜನೂರಿನ  ದೊಡ್ಮನೆಯಲ್ಲಿ  ಮದುವೆ  ಸಂಭ್ರಮ  

LK   ¦    May 21, 2019 04:11:43 PM (IST)
ಗಾಜನೂರಿನ  ದೊಡ್ಮನೆಯಲ್ಲಿ  ಮದುವೆ  ಸಂಭ್ರಮ   

ಚಾಮರಾಜನಗರ : ಕನ್ನಡ ಚಿತ್ರ ರಂಗದ ದೊಡ್ಮನೆಯಲ್ಲಿ ಮದುವೆಯ ಸಂಭ್ರಮ. ಡಾ.ರಾಜ್‍ಕುಮಾರ್  ಹುಟ್ಟೂರು ಗಾಜನೂರಿನ ಹೊಸ ಮನೆಯಲ್ಲಿ ಡಾ.ರಾಜ್ ಮೊಮ್ಮಗನಿಗೆ ಅರಿಶಿನ ಶಾಸ್ತ್ರ ಕಾರ್ಯ ನಡೆಯಿತು. ರಾಘವೇಂದ್ರ ರಾಜ್‍ಕುಮಾರ್ ಅವರ ಮಗ ಯುವರಾಜ್ ಕುಮಾರನ ಮದುವೆ ಸಂಭ್ರಮ ದಲ್ಲಿ ಡಾ.ರಾಜ್ ಕುಟುಂಬದವರು ಭಾಗಿಯಾಗಿ ಸಂಭ್ರಮಿಸಿದರು. 

ಇದೇ ತಿಂಗಳ 25, 26 ರಂದು ಬೆಂಗಳೂರಿನ ಅರಮನೆಯ ಆವರಣದಲ್ಲಿ ನಡೆಯುವ ಮದುವೆ ಕಾರ್ಯ ನಿಮಿತ್ತ, ದೊಡ್ಡಗಾಜನೂರಿನ ರಾಜ್‍ ಅವರ ಕನಸಿನ ಮನೆಯಲ್ಲಿ ಅರಿಶಿನ ಶಾಸ್ತ್ರ ನಡೆಯಿತು. ವಿವಾಹ ಪೂರ್ವ ಅರಿಶಿನ ಶಾಸ್ತ್ರ ನೆರವೇರಿಸಲು ಹುಟ್ಟೂರಿಗೆ ಆಗಮಿಸಿದ್ದ ರಾಜ್ ಕುಟುಂಬದವರು. ಆಪ್ತರಿಗಷ್ಟೆ ಆಹ್ವಾನ ನೀಡಿದ್ದರು. 

ಹಲವಾರು ಸ್ನೇಹಿತರು, ಸಂಬಂಧಿಕರ ಸಮ್ಮುಖದಲ್ಲಿ  ಅರಿಶಿನ ಶಾಸ್ತ್ರ ನಡೆದಿದ್ದು,  ಅರಿಶಿನ ಶಾಸ್ತ್ರ , ನೀರು ಹಾಕುವ ಶಾಸ್ತ್ರದಲ್ಲಿ ಕುಟುಂಬಸ್ಥರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ  ರಾಘವೇಂದ್ರ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್, ಸೇರಿದಂತೆ ತಮ್ಮ ಹತ್ತಿರದ ನೆಂಟರಿಷ್ಟರು ಸಂಬಂಧಿಕರು ಮಾತ್ರ  ಕಾರ್ಯಕ್ರಮದಲ್ಲಿ ಭಾಗಿದ್ದರು. ಶಿವರಾಜ್ ಕುಮಾರ್, ಪುನೀತ್‍ರಾಜ್‍ಕುಮಾರ್ ಗೈರಾಗಿದ್ದು ಎದ್ದು ಕಾಣುತ್ತಿತ್ತು.

More Images