ಚಂದನ್ ಶೆಟ್ಟಿ-ನಿವೇದಿತಾ ಗೌಡ ವಿವಾಹಕ್ಕೆ ತಯಾರಾಗುತ್ತಿದೆ ಹೊಸ ಹಾಡು

ಚಂದನ್ ಶೆಟ್ಟಿ-ನಿವೇದಿತಾ ಗೌಡ ವಿವಾಹಕ್ಕೆ ತಯಾರಾಗುತ್ತಿದೆ ಹೊಸ ಹಾಡು

HSA   ¦    Feb 20, 2020 02:44:33 PM (IST)
ಚಂದನ್ ಶೆಟ್ಟಿ-ನಿವೇದಿತಾ ಗೌಡ ವಿವಾಹಕ್ಕೆ ತಯಾರಾಗುತ್ತಿದೆ ಹೊಸ ಹಾಡು

ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿಗಳಾಗಿದ್ದ ರ‍್ಯಾಪರ್ ಚಂದನ್ ಶೆಟ್ಟಿ ಮತ್ತು ರೂಪದರ್ಶಿ ನಿವೇದಿತಾ ಗೌಡ ಫೆ.25 ಮತ್ತು 26ರಂದು ನಡೆಯಲಿರುವ ತಮ್ಮ ಮದುವೆಗೆ ಅತಿಥಿಗಳನ್ನು ಆಹ್ವಾನಿಸಲು ವಿಶೇಷ ಹಾಡೊಂದನ್ನು ಸಂಯೋಜಿಸಲಿದ್ದಾರೆ.

ಇಬ್ಬರು ಹಾಡನ್ನು ತಯಾರಿಸುವಲ್ಲಿ ವ್ಯಸ್ತರಾಗಿದ್ದಾರೆ. ಇದು ಮದುವೆಗೆ ಮೊದಲು ಬಿಡುಗಡೆ ಆಗಲಿದ್ದು, ಇದರಲ್ಲಿ ಅವರಿಬ್ಬರ ನಡುವಿನ ಪ್ರೀತಿ ಹಾಗೂ ಮದುವೆ ವಿಚಾರವು ಇರಲಿದೆ ಎಂದು ತಿಳಿದುಬಂದಿದೆ.

ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ ನಿವೇದಿತಾ ಮತ್ತು ಚಂದನ್ ಮೊದಲ ಸಲ ಭೇಟಿ ಮಾಡಿದ್ದರು. ಇದರ ಬಳಿಕ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದು. ನಿವೇದಿತಾ ಈಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉದ್ಯೋಗ ಮಾಡುತ್ತಿದ್ದಾರೆ.

ಮೈಸೂರಿನಲ್ಲಿ ನಡೆಯಲಿರುವ ಮದುವೆಗೆ ಅವರು ಈಗಾಗಲೇ ಗಣ್ಯರು ಹಾಗೂ ಕುಟುಂಬದವರು, ಸ್ನೇಹಿತರನ್ನು ಆಹ್ವಾನಿಸುತ್ತಿದ್ದಾರೆ. ಪುನೀತ್ ರಾಜ್ ಕುಮಾರ್, ಸುದೀಪ್, ದರ್ಶನ್ ಮತ್ತು ಇತರ ಹಲವು ಮಂದಿ ಸಿನಿಮಾ ನಟ ನಟಿಯರು ಮದುವೆಗೆ ಆಗಮಿಸುವ ನಿರೀಕ್ಷೆಯಿದೆ.