ಕುತೂಹಲ ಹುಟ್ಟಿಸಿದೆ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರದ ಟ್ರೇಲರ್

ಕುತೂಹಲ ಹುಟ್ಟಿಸಿದೆ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರದ ಟ್ರೇಲರ್

YK   ¦    Jan 13, 2020 04:22:58 PM (IST)
ಕುತೂಹಲ ಹುಟ್ಟಿಸಿದೆ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರದ ಟ್ರೇಲರ್

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಸಿನಿಮಾದ ಟ್ರೇಲರ್ ನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು.

ನಂತರ ಮಾತನಾಡಿದ ಅವರು, ಚಿತ್ರದ ಟ್ರೇಲರ್ ಉತ್ತಮವಾಗಿ ಮೂಡಿಬಂದಿದೆ. ದೊಡ್ಡ ತಾರಾ ಬಳಗವಿದ್ದು ಎಲ್ಲರೂ ನೋಡಿ ಚಿತ್ರತಂಡಕ್ಕೆ ಹಾರೈಸಿ ಎಂದು ಶುಭಕೋರಿದರು.

ಸಿನಿಮಾದಲ್ಲಿ ನಾಯಕನಾಗಿ ವಸಿಷ್ಠ ಸಿಂಹ, ನಾಯಕಿಯಾಗಿ ಮಾನ್ವಿತಾ ಹರೀಶ್ ಅವರು ನಟಿಸಿದ್ದಾರೆ. ಅನಂತ್ ನಾಗ್, ಸುಮಲತಾ ಅಂಬರೀಶ್, ಸಾಧುಕೋಕಿಲ, ಪ್ರಕಾಶ್ ಬೆಳವಾಡಿ ಸೇರಿದಂತೆ ದೊಡ್ಡ ತಾರ ಬಳಗವೇ ಇಲ್ಲಿದೆ.