ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ಪುತ್ತೂರಿನ ಬೆಡಗಿ ‘ದುನಿಯಾ ರಶ್ಮಿ’

ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ಪುತ್ತೂರಿನ ಬೆಡಗಿ ‘ದುನಿಯಾ ರಶ್ಮಿ’

YK   ¦    Oct 14, 2019 04:34:02 PM (IST)
ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ಪುತ್ತೂರಿನ ಬೆಡಗಿ ‘ದುನಿಯಾ ರಶ್ಮಿ’

ಕರಾವಳಿಯ ಹುಡುಗಿ ದುನಿಯಾ ರಶ್ಮಿ ಕನ್ನಡ ಬಿಗ್ ಬಾಸ್ ಸೀಸನ್ 7 ಗೆ ಎಂಟ್ರಿ ಕೊಟ್ಟಿದ್ದಾರೆ.

ದುನಿಯಾ ಚಿತ್ರದ ನಂತರ ಚಿತ್ರಗಳು ತೆರೆಕಂಡರು ಅಷ್ಟೊಂದು ಯಶಸ್ಸನ್ನು ಕಾಣದ ರಶ್ಮಿ ಚಿತ್ರರಂಗದಿಂದ ಸ್ವಲ್ಪ ದೂರನೇ ಉಳಿದಿದ್ದರೂ ಎನ್ನಬಹುದು. ಇದೀಗ ಬಿಗ್ ಬಾಸ್ ಮೂಲಕ ಮತ್ತೇ ಜನರಿಗೆ ಹತ್ತಿರವಾಗಲಿದ್ದಾರೆ.

ಇವರು ಮೂಲತಃ ಪುತ್ತೂರಿನವರು. ಅನಿರೀಕ್ಷಿತವಾಗಿ ಚಿತ್ರರಂಗಕ್ಕೆ ಬಂದ ಅವರಿಗೆ ದುನಿಯಾ ಚಿತ್ರ ದೊಡ್ಡ ಖ್ಯಾತಿಯನ್ನು ತಂದುಕೊಟ್ಟಿತು. ಆದರೆ ಆ ಖ್ಯಾತಿ ಹಾಗೇ ಮುಂದುವರೆಯಲಿಲ್ಲ. ಇದೀಗ ಬಿಗ್ ಬಾಸ್ ಮೂಲಕ ಅದೃಷ್ಟ ಪರೀಕ್ಷೆ ಇಳಿದಿದ್ದಾರೆ. 

‘ಕಲ್ಲರಳಿ ಹೂವಾಗಿ’ ಚಿತ್ರದ ಮೂಲಕ ಸಣ್ಣ ಪಾತ್ರದಿಂದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಅವರು ದುನಿಯಾ, ಅಕ್ಕ-ತಂಗಿ, ವೆಂಕಿ ಹಾಗೂ ಮುರಾರಿ ಚಿತ್ರಗಳಲ್ಲಿ ಅಭಿನಯಿಸಿದ್ದರು. ಇದೀಗ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲು ಸ್ಲೀಮ್ ಆಗಿರುಯವ ರಶ್ಮಿ ಎರಡು ಚಿತ್ರಗಳಲ್ಲಿ ಅಭಿನಯಿಸಿದ್ದು ತೆರೆಗೆ ಬರಲು ಸಿದ್ಧವಾಗಿದೆ. ಅದಲ್ಲದೆ ತುಳುವಿನಲ್ಲೂ ಅಭಿನಯಿಸಲು ಸೂಕ್ತ ಚಿತ್ರಕತೆಗಾಗಿ ಕಾಯುತ್ತಿದ್ದಾರೆ.  

 

More Images