ಡ್ರಗ್ಸ್ ಪ್ರಕರಣ; ಕನ್ನಡ ಬಿಗ್ ಬಾಸ್ ಖ್ಯಾತಿಯ ಮಸ್ತಾನ್ ಮನೆ ದಾಳಿ

ಡ್ರಗ್ಸ್ ಪ್ರಕರಣ; ಕನ್ನಡ ಬಿಗ್ ಬಾಸ್ ಖ್ಯಾತಿಯ ಮಸ್ತಾನ್ ಮನೆ ದಾಳಿ

MS   ¦    Mar 05, 2021 08:01:20 PM (IST)
ಡ್ರಗ್ಸ್ ಪ್ರಕರಣ; ಕನ್ನಡ ಬಿಗ್ ಬಾಸ್ ಖ್ಯಾತಿಯ ಮಸ್ತಾನ್ ಮನೆ ದಾಳಿ

ಬೆಂಗಳೂರು: ಕನ್ನಡ ಬಿಗ್ ಬಾಸ್ ಖ್ಯಾತಿಯ ಮಸ್ತಾನ್ ಮನೆ ಮೇಲೆ ಇಂದು ಪೊಲೀಸರು ದಾಳಿ ನಡೆಸಿದ್ದು, ಮಾದಕ ದ್ರವ್ಯ ಸೇವನೆ ಮತ್ತು ಸರಬರಾಜು ಜಾಲದ ಮೇಲೆ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಕನ್ನಡದ ಬಿಗ್ ಬಾಸ್ ನಾಲ್ಕನೇ ಆವೃತ್ತಿಯಲ್ಲಿ ಮಸ್ತಾನ್ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಸ್ಪರ್ಧಿಸಿದ್ದರು. ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್ ನನ್ನು ನಗರದ ಹೆಣ್ಣೂರು ಬಳಿ ಬಂಧಿಸಲಾಗಿದೆ. ಈತನಿಂದ 40 ಲಕ್ಷ ರೂ. ಮೌಲ್ಯದ 500 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ.

ನೈಜೀರಿಯನ್ ಡ್ರಗ್ ಪೆಡ್ಲರ್ ಜೊತೆ ಮಸ್ತಾನ್ ನಂಟು ಹೊಂದಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಸಂಜಯ್ ನಗರದಲ್ಲಿರುವ ಮನೆಯ ಮೇಲೆ ಗೋವಿಂದಪುರ ಪೊಲೀಸರು ದಾಳಿ ನಡೆಸಿ ಹುಡುಕಾಟ ನಡೆಸಿದ್ದಾರೆ.