ಪುಷ್ಪಗಿರಿಯಲ್ಲಿ ನಟ ಉಪೇಂದ್ರ ಜನ್ಮ ದಿನಾಚರಣೆ

ಪುಷ್ಪಗಿರಿಯಲ್ಲಿ ನಟ ಉಪೇಂದ್ರ ಜನ್ಮ ದಿನಾಚರಣೆ

CI   ¦    Sep 21, 2020 10:01:56 AM (IST)
ಪುಷ್ಪಗಿರಿಯಲ್ಲಿ ನಟ ಉಪೇಂದ್ರ ಜನ್ಮ ದಿನಾಚರಣೆ

ಮಡಿಕೇರಿ: ಕೊಡಗು ಜಿಲ್ಲೆಗೆ ಶನಿವಾರ ಬಂದಿದ್ದ ಚಿತ್ರನಟ ಉಪೇಂದ್ರ ಅವರು ಸೋಮವಾರಪೇಟೆ ತಾಲ್ಲೂಕಿನ ಪುಷ್ಪಗಿರಿ ಸಮೀಪದ ಆಯಾಟನ ರೆಸಾರ್ಟ್‌ನಲ್ಲಿ ಜನ್ಮ ದಿನಾಚರಣೆ ಆಚರಿಸಿಕೊಂಡು ಸಂಭ್ರಮಿಸಿದರು.

ಉಪೇಂದ್ರ ಅವರ ಪತ್ನಿ ಪ್ರಿಯಾಂಕ, ಪುತ್ರ, ಸಂಗೀತ ನಿರ್ದೇಶಕ ಗುರುಕಿರಣ್‌ ಹಾಗೂ ಕುಟುಂಬಸ್ಥರು ಜೊತೆಗಿದ್ದರು. ಕುಟುಂಬಸ್ಥರೊಂದಿಗೆ ರೆಸಾರ್ಟ್‌ನಲ್ಲೇ ವಾಸ್ತವ್ಯ ಮಾಡಿದ್ದರು. ಜನ್ಮ ದಿನಾಚರಣೆ ಸಂಭ್ರಮದ ಫೋಟೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಉಪೇಂದ್ರ ಅವರು ಕುಟುಂಬಸ್ಥರೊಂದಿಗೆ ಚಾರಣೆ ಮಾಡಿ ಪ್ರಕೃತಿ ಸೊಬಗು ಸವಿದರು. ಜಲಪಾತ ವೀಕ್ಷಿಸಿ ಸಂಭ್ರಮಿಸಿದ್ದಾರೆ. ಜಲಪಾತದ ಎದುರು ನಿಂತು ಸ್ನೇಹಿತರೊಂದಿಗೆ ಸೆಲ್ಫಿ ತೆಗೆದುಕೊಂಡರು. ಹಾಗೆಯೇ ಪ್ರವಾಸದ ನೆನಪಿಗೆ ರೆಸಾರ್ಟ್‌ ಆವರಣದಲ್ಲಿ ಸಸಿ ನೆಟ್ಟರು ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ.