ಮುದ್ದಾದ ಮಗಳ ಫೋಟೋವನ್ನು ಪ್ರಕಟಿಸಿದ ಯಶ್-ರಾಧಿಕಾ ದಂಪತಿ

ಮುದ್ದಾದ ಮಗಳ ಫೋಟೋವನ್ನು ಪ್ರಕಟಿಸಿದ ಯಶ್-ರಾಧಿಕಾ ದಂಪತಿ

YK   ¦    May 07, 2019 04:02:33 PM (IST)
ಮುದ್ದಾದ ಮಗಳ ಫೋಟೋವನ್ನು ಪ್ರಕಟಿಸಿದ ಯಶ್-ರಾಧಿಕಾ ದಂಪತಿ

ಬೆಂಗಳೂರು: ಹೇಳಿದಂತೆ ಅಕ್ಷಯ ತೃತೀಯದಂದು ತಾರಾ ದಂಪತಿ ಯಶ್-ರಾಧಿಕಾ ತಮ್ಮ ಮುದ್ದಿನ ಮಗಳ ಫೋಟೋವನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ.

ಯಶ್-ರಾಧಿಕಾ ಪಂಡಿತ್ ದಂಪತಿ ತಮ್ಮ ಅಧಿಕೃತ ಫೇಸ್ ಬುಕ್ ಹಾಗೂ ಇನ್ ಸ್ಟಾಗ್ರಾಂ ಖಾತೆಯಲ್ಲಿ ಮಗಳ ಫೋಟೋವನ್ನು ಪ್ರಕಟಿಸಿದ್ದಾರೆ.

ಇವಳು ಬರೋವರ್ಗು ನನ್ನ ಹವಾ, ಇವಳು ಬಂದ ಮೇಲೆ ಇವಳದ್ದೇ ಹವಾ! ಇನ್ನೂ ಹೆಸರಿಟ್ಟಿಲ್ಲ ಸದ್ಯಕ್ಕೆ ಬೇಬಿ YR ಅಂತಾನೇ ಕರೆಯೋಣ..ಎಂದಿನಂತೆ ನಿಮ್ಮ ಆಶೀರ್ವಾದ ಇವಳ ಮೇಲೂ ಇರಲಿ’ ಎಂದು ತಮ್ಮ ಸಿನಿಮಾ ಡೈಲಾಗ್ ನ್ನು ಮಗಳಿಗೆ ಹೋಲಿಸಿ ಯಶ್ ಮುದ್ದು ಮಗಳ ಫೋಟೋ ಜತೆ ಪ್ರಕಟಿಸಿದ್ದಾರೆ.

ಕತ್ತೆತ್ತಿ ಮುದ್ದಾಗಿ ನೋಡುತ್ತಿರುವ ಮಗಳ ಫೋಟೋವನ್ನು ಯಶ್-ರಾಧಿಕಾ ಪ್ರಕಟಿಸಿದ್ದಾರೆ.