ಫೆಬ್ರವರಿಯಲ್ಲಿ ಪ್ರಸಾರವಾಗಲಿದೆ ಬಿಗ್ ಬಾಸ್ ಸೀಸನ್ 8

ಫೆಬ್ರವರಿಯಲ್ಲಿ ಪ್ರಸಾರವಾಗಲಿದೆ ಬಿಗ್ ಬಾಸ್ ಸೀಸನ್ 8

MS   ¦    Jan 23, 2021 04:07:12 PM (IST)
ಫೆಬ್ರವರಿಯಲ್ಲಿ ಪ್ರಸಾರವಾಗಲಿದೆ ಬಿಗ್ ಬಾಸ್ ಸೀಸನ್ 8

ಬೆಂಗಳೂರು: ಬಹುನಿರೀಕ್ಷಿತ ಹಾಗೂ ಚರ್ಚೆಗಳಿಗೆ ಈಡಾಗುವ ಬಿಗ್ ಬಾಸ್ ಮತ್ತೆ ಬರುತ್ತಿದೆ. ಈ ಕುರಿತು ಅಧಿಕೃತ ಘೋಷಣೆಗಳು ಕಾಣಿಸಿಕೊಂಡಿದ್ದು, ಬಿಗ್ ಬಾಸ್ ಸೀಸನ್ 8 ಫೆಬ್ರವರಿ ತಿಂಗಳಲ್ಲಿ ಬರಲಿದೆ ಎಂದು ತಿಳಿದುಬಂದಿದೆ.

ಸಾಧಾರಣವಾಗಿ ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ಬಿಗ್ ಬಾಸ್ ಪ್ರಸಾರವಾಗುತ್ತಿತ್ತು. ಆದರೆ ಕೊರೋನಾ ಕಾಲಘಟ್ಟದಿಂದ ಸಾಧ್ಯವಾಗದ ಕಾರಣ ಮುಂದೂಡಿದ್ದು, ಇದೀಗ ಪ್ರಸಾರವಾಗಲಿದೆ ಎಂದು ಹೇಳಲಾಗುತ್ತದೆ. ಈ ಬಗ್ಗೆ ಅಧಿಕೃತವಾಗಿ ಪೋಸ್ಟ್ ಮಾಡಿರುವ ಕಿಚ್ಚ ಸುದೀಪ್ ಬಿಗ್ ಬಾಸ್ ಸೀಸನ್ 8 ರ ಪ್ರಮೋಷನ್ ಆಗುತ್ತಿದೆ ಎಂದು ಅದರಲ್ಲಿ ತಿಳಿಸುತ್ತಾರೆ.

ಅಷ್ಟೇ ಅಲ್ಲದೆ, ಕಲರ್ಸ್ ಕನ್ನಡದ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಸುದೀಪ್ ಅವರ ಜೊತೆ ಇರುವ ಒಂದು ಫೋಟೋವನ್ನು ಶೇರ್ ಮಾಡಿ ಫೆಬ್ರವರಿಯಲ್ಲಿ ಬಿಗ್ ಬಾಸ್ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.