ಹಿರಿಯ ನಟಿ ಜಯಂತಿ ಆಸ್ಪತ್ರೆಗೆ ದಾಖಲು

ಹಿರಿಯ ನಟಿ ಜಯಂತಿ ಆಸ್ಪತ್ರೆಗೆ ದಾಖಲು

HSA   ¦    Jul 08, 2020 12:49:20 PM (IST)
ಹಿರಿಯ ನಟಿ ಜಯಂತಿ ಆಸ್ಪತ್ರೆಗೆ ದಾಖಲು

ಬೆಂಗಳೂರು: ಸ್ಯಾಂಡಲ್ ವುಡ್ ನ ಹಿರಿಯ ನಟಿ ಜಯಂತಿ ಅವರು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿರುವರು.

ಹಲವು ವರ್ಷಗಳಿಂದ ಅಸ್ತಮಾದಿಂದ ಬಳಲುತ್ತಿರುವ ಜಯಂತಿ ಅವರಿಗೆ ಹವಾಮಾನದಲ್ಲಿ ಆಗಿರುವ ಏರುಪೇರಿನಿಂದಾಗಿ ಆರೋಗ್ಯದಲ್ಲಿ ಸಮಸ್ಯೆ ಆಗಿದೆ ಎಂದು ಜಯಂತಿ ಅವರ ಮಗ ಕೃಷ್ಣ ಕುಮಾರ್ ತಿಳಿಸಿದ್ದಾರೆ.

ಕೊವಿಡ್ ಪರೀಕ್ಷೆ ನಡೆಸಿದ್ದೇವೆ. ಅದು ನೆಗೆಟಿವ್ ಬಂದಿದೆ. ಇದರಿಂದ ತುಂಬಾ ಸಮಾಧಾನವಾಗಿದೆ. ಅವರು ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೃಷ್ಣಕುಮಾರ್ ಅವರು ಹೇಳಿದ್ದಾರೆ.