ಬೆಳ್ತಂಗಡಿಯ ಸುರ್ಯ ದೇವಳಕ್ಕೆ ಹಿರಿಯ  ನಟಿ ಭಾರತಿ ವಿಷ್ಣುವರ್ಧನ್ ಭೇಟಿ

ಬೆಳ್ತಂಗಡಿಯ ಸುರ್ಯ ದೇವಳಕ್ಕೆ ಹಿರಿಯ  ನಟಿ ಭಾರತಿ ವಿಷ್ಣುವರ್ಧನ್ ಭೇಟಿ

DA   ¦    Feb 23, 2020 07:09:16 PM (IST)
ಬೆಳ್ತಂಗಡಿಯ ಸುರ್ಯ ದೇವಳಕ್ಕೆ ಹಿರಿಯ  ನಟಿ ಭಾರತಿ ವಿಷ್ಣುವರ್ಧನ್ ಭೇಟಿ

ಮಣ್ಣಿನ ಹರಕೆಗೆ ಪ್ರಸ್ತಿದ್ದಿಯನ್ನು ಪಡೆದಿರುವ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನಕ್ಕೆ ಚಲನಚಿತ್ರ ರಂಗದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ಶಿವರಾತ್ರಿಯಂದು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಕ್ಷೇತ್ರದ ವತಿಯಿಂದ ಅವರನ್ನು ಗೌರವಿಸಲಾಯಿತು.

ಇದೇ ದಿನ ಬಾಗಲಕೋಟೆ ಜಿಲ್ಲಾಕಾರಿ ಕ್ಯಾ.ಡಾ. ಕೆ. ರಾಜೇಂದ್ರ ಹಾಗೂ ಪುತ್ತೂರು ಉಪವಿಭಾಗಾಕಾರಿ ಡಾ. ಯತೀಶ್ ಉಳ್ಳಾಲ್ ಭೇಟಿ ನೀಡಿ ಸೇವೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಆನುವಂಶಿಕ ಆಡಳಿತ ಮೊಕ್ತೇಸರ ಸುಭಾಶ್ಚಂದ್ರ ಸುರ್ಯಗುತ್ತು, ಎಸ್‍ಡಿಎಂ ಕಾಲೇಜಿನ ಪ್ರಿನ್ಸಿಪಾಲ್ ಪೆÇ್ರ. ಸತೀಶ್ಚಂದ್ರ ಸುರ್ಯಗುತ್ತು, ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ. ರಾಜಶೇಖರ ಅಜ್ರಿ, ಬೆಳ್ತಂಗಡಿ ಸಿ.ಎ.ಬ್ಯಾಂಕಿನ ಅಧ್ಯಕ್ಷ ಮುನಿರಾಜ ಅಜ್ರಿ ಇದ್ದರು.