ಮಹೇಶ್ ಬಾಬುಗೆ ರಶ್ಮಿಕಾ ಮಂದಣ್ಣ ನೀಡಿದ ಉಡುಗೊರೆಯಾದರೂ ಏನು?

ಮಹೇಶ್ ಬಾಬುಗೆ ರಶ್ಮಿಕಾ ಮಂದಣ್ಣ ನೀಡಿದ ಉಡುಗೊರೆಯಾದರೂ ಏನು?

HSA   ¦    Jun 30, 2020 02:11:01 PM (IST)
ಮಹೇಶ್ ಬಾಬುಗೆ ರಶ್ಮಿಕಾ ಮಂದಣ್ಣ ನೀಡಿದ ಉಡುಗೊರೆಯಾದರೂ ಏನು?

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಅವರು ಸ್ಯಾಂಡಲ್ ವುಡ್ ನಲ್ಲಿ ತನ್ನ ಸಿನಿಮಾ ಜೀವನ ಆರಂಭಿಸಿದರೂ ಈಗ ಟಾಲಿವುಡ್ ನಲ್ಲಿ ತುಂಬಾ ಬೇಡಿಕೆಯಲ್ಲಿರುವ ನಟಿ.

ಈಗ ಅವರು ತೆಲುಗಿನ ಪ್ರಿನ್ಸ್ ಮಹೇಶ್ ಬಾಬು ಅವರಿಗೆ ಕೊಡಗಿನ ಕೆಲವು ಸಾವಯವ ಉತ್ಪನ್ನಗಳನ್ನು ಕಳುಹಿಸಿಕೊಟ್ಟು ಮನಗೆದ್ದಿದ್ದಾರೆ.

ಮಹೇಶ್ ಮತ್ತು ಅವರ ಪತ್ನಿ ನಮೃತಾ ಶಿರೋಡ್ಕರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ ಮತ್ತು ರಶ್ಮಿಕಾಗೆ ಧನ್ಯವಾದ ಕೂಡ ಹೇಳಿರುವರು.

ರಶ್ಮಿಕಾ ಅವರು ಮಾವಿನ ಕಾಯಿ ಉಪ್ಪಿನಕಾಯಿ ಸಹಿತ ಕೆಲವು ಸಾವಯವ ಉತ್ಪನ್ನಗಳನ್ನು ಮಹೇಶ್ ಬಾಬು ಕುಟುಂಬಕ್ಕೆ ಕಳುಹಿಸಿಕೊಟ್ಟಿರುವರು ಎಂದು ಹೇಳಲಾಗಿದೆ.