ಯಶಸ್ಸಿನ ಬೆನ್ನಲ್ಲೇ ವಿವಾದಕ್ಕೆ ಗುರಿ ಆಗಿರುವ ಪೊಗರು ಸಿನಿಮಾ

ಯಶಸ್ಸಿನ ಬೆನ್ನಲ್ಲೇ ವಿವಾದಕ್ಕೆ ಗುರಿ ಆಗಿರುವ ಪೊಗರು ಸಿನಿಮಾ

MS   ¦    Feb 21, 2021 05:01:29 PM (IST)
ಯಶಸ್ಸಿನ ಬೆನ್ನಲ್ಲೇ ವಿವಾದಕ್ಕೆ ಗುರಿ ಆಗಿರುವ ಪೊಗರು ಸಿನಿಮಾ

ಬೆಂಗಳೂರು: ಲೋಗೋ ನಂತರ ರಿಲೀಸ್ ಆದ ಹಾಗೂ ಭರ್ಜರಿ ಓಪನಿಂಗ್ ಕಂಡ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ಇದೀಗ ವಿವಾದಕ್ಕೆ ಗುರಿಯಾಗಿದೆ.

ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದ ಮೂರ್ತಿ, "ಈ ಚಿತ್ರದಲ್ಲಿ ಅರ್ಚಕರು ಹಾಗೂ ಪುರೋಹಿತರನ್ನು ಅವಹೇಳನಕಾರಿಯಾಗಿ ಚಿತ್ರೀಕರಿಸಿ ಪ್ರದರ್ಶಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದು ಖಂಡನೀಯವಾದದ್ದು" ಎಂದು ಹೇಳಿದ್ದಾರೆ.

ಯಾವುದೇ ಜಾತಿ ಧರ್ಮವನ್ನು ಅವಹೇಳನಕಾರಿಯಾಗಿ ತೋರಿಸುವುದು ಸರಿಯಾದ ಕ್ರಮವಲ್ಲ ಅದರಿಂದ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡಿದಂತಾಗುತ್ತದೆ. ತಕ್ಷಣವೇ ಈ ದೃಶ್ಯವನ್ನು ತೆಗೆದುಹಾಕಬೇಕು ಎಂದು ಆಗ್ರಹಿಸುತ್ತಾರೆ.

ಅಷ್ಟೇ ಅಲ್ಲದೆ, ಟಗರು ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರು ಕ್ಷಮೆ ಕೋರಬೇಕು. ಇಲ್ಲದಿದ್ದರೆ ಮಂಗಳವಾರ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ, ತದನಂತರ ಇಡೀ ರಾಜ್ಯಾದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.