90ನೇ ಹುಟ್ಟುಹಬ್ಬ ಆಚರಿಸಿಕೊಂಡ ಗಾನಕೋಗಿಲೆ ಲತಾ ಮಂಗೇಶ್ಕರ್

90ನೇ ಹುಟ್ಟುಹಬ್ಬ ಆಚರಿಸಿಕೊಂಡ ಗಾನಕೋಗಿಲೆ ಲತಾ ಮಂಗೇಶ್ಕರ್

HSA   ¦    Sep 28, 2019 03:49:21 PM (IST)
90ನೇ ಹುಟ್ಟುಹಬ್ಬ ಆಚರಿಸಿಕೊಂಡ ಗಾನಕೋಗಿಲೆ ಲತಾ ಮಂಗೇಶ್ಕರ್

ಮುಂಬಯಿ: ಗಾನಕೋಗಿಲೆ ಲತಾ ಮಂಗೇಶ್ಕರ್ ಅವರು ಶನಿವಾರ ತನ್ನ 90ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಈ ವೇಳೆ ಬಾಲಿವುಡ್ ನ ಪ್ರಮುಖರಾಗಿರುವ ಧರ್ಮೇಂದ್ರ, ಹೇಮಮಾಲಿನಿ, ರಿಷಿ ಕಪೂರ್, ಮಾಧುರಿ ದೀಕ್ಷಿತ್, ಎಆರ್ ರೆಹಮಾನ್, ಶ್ರೇಯಸ್ ಘೋಷಲ್ ಮತ್ತು ಅನಿಲ್ ಕಪೂರ್ ಅವರು ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿ, ದೀರ್ಘಾಯುರಾರೋಗ್ಯ ಪ್ರಾರ್ಥಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮೊದಲ ಪ್ರಮುಖರು ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.

ಮಂಗೇಶ್ಕರ್ ಅವರು ತನ್ನ 13ನೇ ವಯಸ್ಸಿನಲ್ಲಿ 1943ರಲ್ಲಿ ಮರಾಠಿ ಸಿನಿಮಾಗಾಗಿ ಮೊದಲ ಹಾಡು ಹಾಡಿದ್ದರು. 1948ರಲ್ಲಿ ಅವರು ಮಜ್ಬೂರ್, ಮಹಾಲ್ ಚಿತ್ರದ ಹಾಡುಗಳು ಜನಪ್ರಿಯತೆ ತಂದುಕೊಟ್ಟವು. ಇದರ ಬಳಿಕ ಅವರು ನೂರಾರು ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದಾರೆ.