ಇದೇ 15ರಂದು 'ಬೆಲ್ ಬಾಟಂ' ಚಿತ್ರ ತೆರೆಗೆ

ಇದೇ 15ರಂದು 'ಬೆಲ್ ಬಾಟಂ' ಚಿತ್ರ ತೆರೆಗೆ

YK   ¦    Feb 12, 2019 05:53:49 PM (IST)
ಇದೇ 15ರಂದು 'ಬೆಲ್ ಬಾಟಂ' ಚಿತ್ರ ತೆರೆಗೆ

ರಿಷಬ್ ಶೆಟ್ಟಿ ಹಾಗೂ ಹರಿಪ್ರಿಯಾ ನಟಿಸಿರುವ ಚಿತ್ರ 'ಬೆಲ್ ಬಾಟಂ' ಇದೇ 15ರಂದು ತೆರೆ ಕಾಣಲಿದೆ. ಚಿತ್ರದಲ್ಲಿ ಯೋಗರಾಜ್ ಭಟ್, ಶಿವಮಣಿ, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಸೇರಿದಂತೆ ಬಹುದೊಡ್ಡ ತಾರಾ ಬಳಗವಿದೆ.

ಚಿತ್ರದ ಟ್ರೇಲರ್ ತುಂಬಾನೇ ಕುತೂಹಲವನ್ನು ಮೂಡಿಸಿದ್ದು ಶೀರ್ಷಿಕೆ ಹೇಳುವ ಹಾಗೇ ಬೆಲ್ ಬಾಟಂ ಪ್ಯಾಂಟ್ ಗಳನ್ನು ಬಳಸುತ್ತಿದ್ದ ದಿನಗಳನ್ನು ಮರುಕಳಿಸುವಂತಿದೆ. ಜಯತೀರ್ಥ ಅವರು ಚಿತ್ರ ನಿರ್ದೇಶನ ಮಾಡಿದ್ದು, ಡಿ.ಕೆ.ದಯಾನಂದ ಅವರು ಚಿತ್ರಕ್ಕೆ ಕಥೆ ಬರೆದಿದ್ದಾರೆ.