ಕ್ರಿಕೆಟಿಗನ ಜತೆ ಡೇಟಿಂಗ್ ಸುದ್ದಿ ತಳ್ಳಿ ಹಾಕಿದ ಅನುಷ್ಕಾ ಶೆಟ್ಟಿ

ಕ್ರಿಕೆಟಿಗನ ಜತೆ ಡೇಟಿಂಗ್ ಸುದ್ದಿ ತಳ್ಳಿ ಹಾಕಿದ ಅನುಷ್ಕಾ ಶೆಟ್ಟಿ

HSA   ¦    Feb 24, 2020 04:57:11 PM (IST)
ಕ್ರಿಕೆಟಿಗನ ಜತೆ ಡೇಟಿಂಗ್ ಸುದ್ದಿ ತಳ್ಳಿ ಹಾಕಿದ ಅನುಷ್ಕಾ ಶೆಟ್ಟಿ

ಹೈದರಾಬಾದ್: ನಾನು ಮನೆಯವರು ನೋಡಿದ ಹುಡುಗನನ್ನೇ ಮದುವೆಯಾಗುತ್ತೇನೆ ಎಂದು ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಅನುಷ್ಕಾ ಶೆಟ್ಟಿ ಮದುವೆ ವಿಚಾರವಾಗಿ ಗಾಳಿಸುದ್ದಿಯು ಹಬ್ಬಿದ್ದು, ಕ್ರಿಕೆಟಿಗನೊಬ್ಬನ ಜತೆಗೆ ಅನುಷ್ಕಾ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಆದರೆ ಅನುಷ್ಕಾ ಇದೆಲ್ಲವನ್ನೂ ತಳ್ಳಿ ಹಾಕಿದ್ದಾರೆ.

ಅನುಷ್ಕಾ ಹೆಸರು ಈ ಹಿಂದೆಯೂ ಕೆಲವು ನಟರ ಜತೆಗೆ ಕೇಳಿಬಂದಿತ್ತು. ಬಾಹುಬಲಿ ಚಿತ್ರದ ಪ್ರಭಾಸ್ ಜತೆ ಅನುಷ್ಕಾ ಹೆಸರು ಕೇಳಿಬಂದಿತ್ತು.