ಕನ್ನಡದ ಹಿರಿಯ ಕಲಾವಿದ ಮೈಕಲ್ ಮಧು ಸಾವು

ಕನ್ನಡದ ಹಿರಿಯ ಕಲಾವಿದ ಮೈಕಲ್ ಮಧು ಸಾವು

YK   ¦    May 14, 2020 09:35:31 AM (IST)
ಕನ್ನಡದ ಹಿರಿಯ ಕಲಾವಿದ ಮೈಕಲ್ ಮಧು ಸಾವು

ಬೆಂಗಳೂರು: ಕನ್ನಡದ ಹಿರಿಯ ನಟ ಮೈಕಲ್ ಮಧು ಬುಧವಾರ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ೫೧ ವರ್ಷದ ಇವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

'ಓಂ' ಚಿತ್ರದ ಮೂಲಕ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡಿದ್ದರು. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿದ್ದರಿಂದ ಮೈಕಲ್ ಉತ್ತಮ ಹೆಸರನ್ನು ಗಳಿಸಿದ್ದರು.

ನಂತರ ಇವರಿಗೆ ಉತ್ತಮ ಅವಕಾಶಗಳು ಬಂದಿತ್ತು. ೩೦೦ ಕ್ಕೂ ಅಧಿಕ ಚಿತ್ರಗಳ ಹಾಸ್ಯ ಪಾತ್ರದಲ್ಲಿ ಮೈಕಲ್ ಗುರುತಿಸಿಕೊಂಡಿದ್ದಾರೆ. ಅದಲ್ಲದೆ ಇವರೊಬ್ಬರು ಉತ್ತಮ ಡ್ಯಾನ್ಸರು ಕೂಡ.