ಡಿಸೆಂಬರ್ ನಲ್ಲಿ ಆಲಿಯಾ- ರಣಬೀರ್ ಮದುವೆ!

ಡಿಸೆಂಬರ್ ನಲ್ಲಿ ಆಲಿಯಾ- ರಣಬೀರ್ ಮದುವೆ!

YK   ¦    Feb 08, 2020 03:58:19 PM (IST)
ಡಿಸೆಂಬರ್ ನಲ್ಲಿ ಆಲಿಯಾ- ರಣಬೀರ್ ಮದುವೆ!

ನವದೆಹಲಿ: ಬಾಲಿವುಡ್ ನ ಕ್ಯೂಟ್ ಜೋಡಿ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಡಿಸೆಂಬರ್ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಮದುವೆ ಸುದ್ದಿ ಜೋರಾಗಿ ಹರಡುತ್ತಿದೆ.

ಸಂದರ್ಶನವೊಂದರಲ್ಲಿ ಆಲಿಯಾ ಭಟ್ ಅವರು ಡಿಸೆಂಬರ್ ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದೇವೆ ಎಂದು ಹೇಳಿದ್ದಾರೆ ಎಂದು ಪತ್ರಿಕೆಯೊಂದು ಪ್ರಕಟಿಸಿದೆ.

ಕಪೂರ್ ಕುಟುಂಬದ ರಣಬೀರ್ ಕಪೂರ್ ಹಾಗೂ ಮಹೇಶ್ ಭಟ್ ಮಗಳು ಆಲಿಯಾ ಭಟ್ ಡೇಟಿಂಗ್ ನಲ್ಲಿರುವ ಸುದ್ದಿ ಗುಟ್ಟಾಗಿಲ್ಲ.

ಕಳೆದ ಎರಡು ವರ್ಷಗಳಿಂಡ ಈ ಜೋಡಿ ಒಟ್ಟೊಟ್ಟಿಗೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದರು. ಅದಲ್ಲದೇ ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ಪ್ರಶಸ್ತಿ ಸ್ವೀಕರಿಸಿದ ಆಲಿಯಾ ಭಟ್ ಅವರು ರಣ್ ಬೀರ್ ಕಪೂರ್ ಗೆ ‘ಐ ಲವ್ ಯೂ’ ಎಂದು ಹೇಳಿದ್ದರು.