ಕಂಗನಾ, ಸೋದರಿ ರಂಗೋಲಿಗೆ ಮುಂಬಯಿ ಪೊಲೀಸರ ಮೂರನೇ ಸಮನ್ಸ್

ಕಂಗನಾ, ಸೋದರಿ ರಂಗೋಲಿಗೆ ಮುಂಬಯಿ ಪೊಲೀಸರ ಮೂರನೇ ಸಮನ್ಸ್

HSA   ¦    Nov 18, 2020 04:48:04 PM (IST)
ಕಂಗನಾ, ಸೋದರಿ ರಂಗೋಲಿಗೆ ಮುಂಬಯಿ ಪೊಲೀಸರ ಮೂರನೇ ಸಮನ್ಸ್

ಮುಂಬೈ: ಮುಂಬಯಿ ಪೊಲೀಸರು ಬುಧವಾರ ಮೂರನೇ ಬಾರಿಗೆ ಬಾಲಿವುಡ್ ನಟಿ ಕಂಗನಾ ರಣವತ್ ಮತ್ತು ಅವರ ಸೋದರಿಗೆ ಸಮನ್ಸ್ ಜಾರಿ ಮಾಡಿರುವರು.

ಕಂಗನಾ ನ.23 ಮತ್ತು ರಂಗೋಲಿ ನ.24ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಸಮನ್ಸ್ ನಲ್ಲಿ ಸೂಚಿಸಲಾಗಿದೆ.

ಕಂಗನಾ ಮತ್ತು ರಂಗೋಲಿ ಮಾಡಿರುವಂತಹ ಕೆಲವು ಟ್ವೀಟ್ ಗಳು ಕೋಮು ಸಾಮರಸ್ಯ ಕೆಡಿಸುವಂತಿದ್ದವು ಎಂದು ಮುಂಬಯಿ ಪೊಲೀಸರಿಗೆ ಬಾಲಿವುಡ್ ನ ಫಿಟ್ನೆಸ್ ಟ್ರೈನರ್ ಮುನಾವರ್ ಅಲಿ ಸೈಯದ್ ದೂರು ನೀಡಿದ್ದರು. ಇದರಿಂದ ಪೊಲೀಸರು ಪ್ರಕರಣ ದಾಖಲಿಸಿರುವರು.

ಇದಕ್ಕೆ ಮೊದಲು ಎರಡು ಸಲ ಇವರಿಬ್ಬರಿಗೆ ಸಮನ್ಸ್ ಜಾರಿ ಮಾಡಲಾಗಿದ್ದು, ಆದರೆ ಇವರು ಕಾರ್ಯಕ್ರಮದಲ್ಲಿ ಭಾಗಿಯಾಗಲು ಇದ್ದ ಕಾರಣ ವಿಚಾರಣೆಗೆ ಹಾಜರಾಗಿರಲಿಲ್ಲ.