15ರಂದು ಕನ್ನಡ ಡಬ್ ಬಾಹುಬಲಿ ಚಿತ್ರ ಖಾಸಗಿ ವಾಹಿನಿಯಲ್ಲಿ ಪ್ರಸಾರ

15ರಂದು ಕನ್ನಡ ಡಬ್ ಬಾಹುಬಲಿ ಚಿತ್ರ ಖಾಸಗಿ ವಾಹಿನಿಯಲ್ಲಿ ಪ್ರಸಾರ

YK   ¦    Nov 12, 2020 09:06:36 AM (IST)
15ರಂದು ಕನ್ನಡ ಡಬ್ ಬಾಹುಬಲಿ ಚಿತ್ರ ಖಾಸಗಿ ವಾಹಿನಿಯಲ್ಲಿ ಪ್ರಸಾರ

ಬೆಂಗಳೂರು: ಕನ್ನಡಕ್ಕೆ ಡಬ್ ಆಗಿರುವ ಎಸ್‌ಎಸ್‌ ರಾಜಮೌಲಿ ನಿರ್ದೇಶನದ ಬಾಹುಬಲಿ ಪಾರ್ಟ್ ೧ ಇದೇ ೧೫ರಂದು ಖಾಸಗಿ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ.

ಕಲರ್ಸ್ ಕನ್ನಡದಲ್ಲಿ ಇದೇ ೧೫ರಂದು ಪ್ರಕಟಗೊಳ್ಳಲಿದೆ. ಈ ಚಿತ್ರದಲ್ಲಿ ನಟ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಾನೆಲ್ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಅವರ ಪ್ರಕಾರ, ಡಬ್ಬಿಂಗ್ ಉತ್ತಮವಾಗಿ ಹೊರಬಂದಿದ್ದು, ನವೆಂಬರ್ ೧೫ರಂದು ಸಂಜೆ ೪.೩೦ಕ್ಕೆ ಚಿತ್ರ ಪ್ರಸಾರಗೊಳ್ಳಲಿದೆ ಎಂದಿದ್ದಾರೆ.

ಕನ್ನಡ ಡಬ್ಬಿಂಗ್ ತೀವ್ರ ವಿರೋಧವಿದ್ದರು ಕೋವಿಡ್ ೧೯ಲಾಕ್ ಡೌನ್ ವೇಳೆ ಅನೇಕ ತೆಲುಗು, ತಮಿಳು ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಪ್ರಸಾರಗೊಂಡಿದೆ.