ನಟಿ ಸಾಯಿ ಪಲ್ಲವಿಯ ಸಂಭಾವನೆಯಲ್ಲಿ ಹೆಚ್ಚಳ

ನಟಿ ಸಾಯಿ ಪಲ್ಲವಿಯ ಸಂಭಾವನೆಯಲ್ಲಿ ಹೆಚ್ಚಳ

Kerrthana Bhat   ¦    Sep 16, 2020 03:40:07 PM (IST)
ನಟಿ ಸಾಯಿ ಪಲ್ಲವಿಯ ಸಂಭಾವನೆಯಲ್ಲಿ ಹೆಚ್ಚಳ

ಸಿತಾರ ಎಂಟರ್‍ಟೈನ್‍ಮೆಂಟ್‍ನಡಿ ನಿರ್ಮಾಣವಾಗುತ್ತಿರುವ, ರಾಹುಲ್ ಸಂಕ್ರತ್ಯನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ, ನಾನಿ ನಟನೆಯ ತೆಲುಗಿನ ‘ಶ್ಯಾಮ್ ಸಿಂಗ ರಾಯ್’ ಚಿತ್ರದಲ್ಲಿ ಪ್ರೇಮಂ ಖ್ಯಾತಿಯ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸುವುದು ಈಗಾಗಲೇ ಪಕ್ಕಾ ಆಗಿದೆ.

ಅಲ್ಲದೇ ನಾಗ ಚೈತನ್ಯ ನಟನೆಯ ‘ಲವ್ ಸ್ಟೋರಿ’ ಮತ್ತು ರಾಣ ದಗ್ಗುಬಾಟಿ ನಾಯಕನಾಗಿರುವ ‘ವಿರಾಟಪರ್ವಂ’ ಚಿತ್ರಕ್ಕೂ ಸಾಯಿ ಪಲ್ಲವಿಯೇ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ನಡುವೆ ಆಕೆಯ ಸಂಭಾವನೆ ಹೆಚ್ಚಿಸಿಕೊಂಡಿರುವ ಬಗ್ಗೆ ಟಾಲಿವುಡ್‍ನಲ್ಲಿ ಮಾತು ಕೇಳಿಬರುತ್ತಿದೆ.

‘ಶ್ಯಾಮ್ ಸಿಂಗ್ ರಾಯ್’ ಚಿತ್ರದ ಕಾಲ್‍ಶೀಟ್‍ಗೆ ಶೀಘ್ರವೇ ಸಹಿ ಹಾಕಲಿದ್ದು, ಈ ಚಿತ್ರದ ನಟನೆಗಾಗಿ ಆಕೆ 2 ಕೋಟಿ ರೂ ಸಂಭಾವನೆಯ ಬೇಡಿಕೆ ಇಟ್ಟಿದ್ದಾರಂತೆ, ನಿರ್ಮಾಪಕರು ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನವೆಂಬರ್ ನಲ್ಲಿ ಈ ಚಿತ್ರದ ಶೂಟಿಂಗ್ ಶುರುವಾಗುವ ನಿರೀಕ್ಷೆ ಇದೆ. ಕೋಲ್ಕತ್ತದಲ್ಲಿ ಇದರ ಬಹುತೇಕ ಭಾಗದ ಚಿತ್ರೀಕರಣ ನಡೆಸಲು ಚಿತ್ರತಂಡ ನಿರ್ಧರಿಸಿದೆ.