ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಹೋದರ ಕಿರಣ್ ಕೊರೋನಾಗೆ ಬಲಿ

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಹೋದರ ಕಿರಣ್ ಕೊರೋನಾಗೆ ಬಲಿ

Ms   ¦    May 03, 2021 06:21:26 PM (IST)
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಹೋದರ ಕಿರಣ್ ಕೊರೋನಾಗೆ ಬಲಿ

ಬೆಂಗಳೂರು : ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸಹೋದರ ಕಿರಣ್ ಕೊರೋನಾಗೆ ಬಲಿಯಾಗಿದ್ದಾರೆ . 

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಅರ್ಜುನ್ ಜನ್ಯ, ನನ್ನ ಸಹೋದರನನ್ನು ಕೋವಿಡ್ ನಿಂದ ಕಳೆದುಕೊಂಡಿದ್ದೇನೆ . ನೋವನ್ನು ಹೇಗೆ ವ್ಯಕ್ತಪಡಿಸಬೇಕೆಂದು ತಿಳಿಯುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. 

 

ಅಷ್ಟೇ ಅಲ್ಲದೇ ನನ್ನ ಕಡೆ ಉಸಿರುವವರೆಗೂ ನನ್ನ ಉಸಿರಲ್ಲಿ ನೀನು ಇರುತ್ತಿಯ ಎಂದು ಅಣ್ಣನ ನೆನೆದು ಭಾವುಕರಾಗಿದ್ದಾರೆ

 

ಈ ಹಿಂದೆ ಅರ್ಜುನ್​ ಜನ್ಯ ಅವರು ಕೂಡ ಸೋಂಕಿಗೆ ತುತ್ತಾಗಿದ್ದರು. ಸೋಂಕಿನಿಂದ ಗುಣಮುಖರಾಗಿದ್ದ ಅವರು ಈಗ ಅದೇ ಸೋಂಕಿಗೆ ತಮ್ಮ ಅಣ್ಣನ ಕಳೆದುಕೊಂಡಿದ್ದಾರೆ.