ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ: ದೀಪಿಕಾ ಪಡುಕೋಣೆಗೆ ಪ್ರಶಸ್ತಿ

ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ: ದೀಪಿಕಾ ಪಡುಕೋಣೆಗೆ ಪ್ರಶಸ್ತಿ

HSA   ¦    Dec 14, 2019 01:01:41 PM (IST)
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ: ದೀಪಿಕಾ ಪಡುಕೋಣೆಗೆ ಪ್ರಶಸ್ತಿ

ಮುಂಬಯಿ: ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿರುವ ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಅವರಿಗೆ 26ನೇ ವಾರ್ಷಿಕ ಕ್ರಿಸ್ಟಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಡಾವೊಸ್ 2020 ವಿಜೇತರ ಪಟ್ಟಿಯಲ್ಲಿ ಪಡುಕೋಣೆ ಏಕೈಕ ನಟಿಯಾಗಿದ್ದಾರೆ.

ಈ ಗೌರವ ಪಡೆಯಲು ತುಂಬಾ ಸಂತೋಷವಾಗುತ್ತಿದೆ. ಸುಮಾರು 300 ಮಿಲಿಯನ್ ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಖಿನ್ನತೆಯು ಈ ಅನಾರೋಗ್ಯಕ್ಕೆ ಮೂಲ ಕಾರಣವಾಗಿದೆ ಮತ್ತು ವಿಶ್ವ ಮಟ್ಟದಲ್ಲಿ ಇದು ದೊಡ್ಡ ಸಮಸ್ಯೆಯಾಗಿದೆ ಎಂದು ದೀಪಿಕಾ ತಿಳಿಸಿದರು.

ಹಿಂದೆದಿಗಿಂತಲೂ ಹೆಚ್ಚಾಗಿ ನಾವು ಕಾಣದೆ ಇರುವ ಮತ್ತು ಕಡೆಗಣಿಸಲ್ಪಟ್ಟಿರುವ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದೇವೆ. ಕ್ರಿಸ್ಟಲ್ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ತುಂಬಾ ಗೌರವವೆನಿಸುತ್ತಿದೆ ಎಂದು ದೀಪಿಕಾ ಹೇಳಿದರು.