'ಆಚಾರ್ಯ' ಚಿತ್ರದ ಹೊಸ ಪೋಸ್ಟರ್ ಬಿಡುಗಡೆ

'ಆಚಾರ್ಯ' ಚಿತ್ರದ ಹೊಸ ಪೋಸ್ಟರ್ ಬಿಡುಗಡೆ

Jayashree Aryapu   ¦    Apr 13, 2021 04:57:47 PM (IST)
'ಆಚಾರ್ಯ' ಚಿತ್ರದ ಹೊಸ ಪೋಸ್ಟರ್ ಬಿಡುಗಡೆ

ರಾಮ್ ಚರಣ್ ಅಭಿನಯದ 'ಆಚಾರ್ಯ' ಚಿತ್ರದ ಹೊಸ ಪೋಸ್ಟರ್ ವೊಂದನ್ನು ಇಂದು ಯುಗಾದಿ ಹಬ್ಬದ ವಿಶೇಷ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್ ನಲ್ಲಿ ರಾಮ್ ಚರಣ್ ಹಾಗೂ ಅವರ ಜೊತೆ ನಟಿಸಿರುವ ಪೂಜಾ ಹೆಗ್ಡೆ ಇದ್ದಾರೆ. ಪೋಸ್ಟರ್ ರಿಲೀಸ್ ಮಾಡುವ ಮೂಲಕ ಪೂಜಾ ಹೆಗ್ಡೆ ಅವರ ಪಾತ್ರವನ್ನು ಇಂದು ರಿವೀಲ್ ಮಾಡಲಾಗಿದೆ.

ಈ ಚಿತ್ರವನ್ನು 140 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಈ ತಿಂಗಳ ಅಂತ್ಯದಲ್ಲಿ ಈ ಸಿನಿಮಾ ಶೂಟಿಂಗ್ ಪೂರ್ಣಗೊಳ್ಳುವ ಸಾಧ್ಯತೆಯೂ ಇದೆ. ಮೇ 13ರಂದು ಬಿಡುಗಡೆಯಾಗಬೇಕಿದ್ದ ಸಿನಿಮಾ ದಿನಾಂಕವನ್ನು ಕೊರೊನಾ ಕಾರಣದಿಂದಾಗಿ ಮುಂದೂಡಲಾಗಿದೆ.