`ವಿಂಡೋ ಸೀಟ್' ಚಿತ್ರದಲ್ಲಿ ಮ್ಯಾಜಿಕಲ್ ಕಂಪೋಸರ್ ನ ಕೈಚಳಕ

`ವಿಂಡೋ ಸೀಟ್' ಚಿತ್ರದಲ್ಲಿ ಮ್ಯಾಜಿಕಲ್ ಕಂಪೋಸರ್ ನ ಕೈಚಳಕ

Sep 30, 2020 03:24:33 PM (IST)
`ವಿಂಡೋ ಸೀಟ್' ಚಿತ್ರದಲ್ಲಿ ಮ್ಯಾಜಿಕಲ್ ಕಂಪೋಸರ್ ನ ಕೈಚಳಕ

ವಿಂಡೋ ಸೀಟ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾದ ಒಂದು ವಾರದಲ್ಲಿ ಎಲ್ಲರ ಮನಸೆಳೆದಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಕೈಯಿಂದ ಮೂಡಿಬಂದಿರುವ ಸಂಗೀತದ ಎಳೆ ಎಲ್ಲರ ಗಮನ ಸೆಳೆದಿದೆ. ಅದರೊಂದಿಗೆ ಚಿತ್ರದ ರೊಮ್ಯಾಂಟಿಕ್ ಥ್ರಿಲ್ಲರ್ ಎಳೆಯನ್ನು ಬಚ್ಚಿಟ್ಟಿರುವ ಚಿತ್ರತಂಡ ಪ್ರೇಕ್ಷಕರಲ್ಲಿನಾ ಕುತೂಹಲವನ್ನು ಹೆಚ್ಚಿಸಿದೆ.

ರಂಗಿತರಂಗ ಖ್ಯಾತಿಯ ನಾಯಕನಟ ನಿರೂಪ್ ಭಂಡಾರಿ ನಟನೆಯ ಚಿತ್ರ ವಿಂಡೋ ಸೀಟ್ ಆಗಿತ್ತು, ಶೀತಲ್ ಶೆಟ್ಟಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ಎಲ್ಲರ ಗಮನ ಸೆಳೆದಿತ್ತು. ಆದರೆ ಇದೀಗ ಮೂಡಿಬಂದಿರುವ ಫಸ್ಟ್ ಲುಕ್ ಮ್ಯೂಸಿಕ್ ನಿಂದ ಎಲ್ಲರ ಕುತೂಹಲ ಹಾಗೂ ನಿರೀಕ್ಷೆಗಳು ದುಪ್ಪಟ್ಟಾಗಿದೆ. ಈ ಚಿತ್ರದ ಮೂಲಕ ಮ್ಯೂಸಿಕಲ್ ಕಂಪೋಸರ್ ನ ಸೂಪರ್ ಹಿಟ್ ಹಾಡುಗಳು ಸಾಲಿಗೆ ಹೊಸ ಹಾಡುಗಳ ಸೇರ್ಪಡೆಯಾಗುತ್ತದೆ ಎಂಬ ನಿರೀಕ್ಷೆ ಎಲ್ಲರಲ್ಲೂ ಹೆಚ್ಚಾಗಿದೆ. ಪ್ರೇಕ್ಷಕರ ಈ ಸ್ಪಂದನೆಯಿಂದ ಚಿತ್ರತಂಡ ತುಂಬಾ ಖುಷಿಯಾಗಿದ್ದಾರೆ.

ಜಾಕ್ ಮಂಜು ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ‘ವಿಂಡೋಸೀಟ್’ ಚಿತ್ರದಲ್ಲಿ ನಿರೂಪ್ ಭಂಡಾರಿ ಅವರೊಂದಿಗೆ ಸಂಜನಾ ಆನಂದ್ ಹಾಗೂಅಮೃತಾ ಅಯ್ಯಂಗಾರ್ ಬಣ್ಣ ಹಚ್ಚಲಿದ್ದಾರೆ.