ಸಾಂಸರಿಕ ಜೀವನದ ಮೊದಲ ಹೆಜ್ಜೆಯಿಟ್ಟ ನಿವೇದಿತಾ- ಚಂದನ್ ಶೆಟ್ಟಿ

ಸಾಂಸರಿಕ ಜೀವನದ ಮೊದಲ ಹೆಜ್ಜೆಯಿಟ್ಟ ನಿವೇದಿತಾ- ಚಂದನ್ ಶೆಟ್ಟಿ

YK   ¦    Oct 21, 2019 03:11:22 PM (IST)
ಸಾಂಸರಿಕ ಜೀವನದ ಮೊದಲ ಹೆಜ್ಜೆಯಿಟ್ಟ ನಿವೇದಿತಾ- ಚಂದನ್ ಶೆಟ್ಟಿ

ಬಿಗ್ ಬಾಸ್ ಬೆಡಗಿ ನಿವೇದಿತಾ ಗೌಡ ಹಾಗೂ ಗಾಯಕ ಚಂದನ್ ಶೆಟ್ಟಿ ಇಂದು ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಸಾಂಸರಿಕ ಜೀವನದ ಮೊದಲ ಹೆಜ್ಜೆಯನ್ನಿಟ್ಟಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ನಿಶ್ಚಿತಾರ್ಥದಲ್ಲಿ ಎರಡು ಕಡೆಯ ಕುಟುಂಬದವರು ಹಾಗೂ ಸ್ನೇಹಿತರು ಸಮ್ಮುಖದಲ್ಲಿ ರಿಂಗ್ ಬದಲಾಯಿಸಿಕೊಂಡಿದ್ದಾರೆ.

ನಿವೇದಿತಾ ಗೌಡ ಹಸಿರು ಸೀರೆಯಲ್ಲಿ ಹಾಗೂ ಚಂದನ್ ಶೆಟ್ಟಿ ಫಾರ್ಮಲ್ ಡ್ರೆಸ್ ಮಿಂಚಿದರು. ಮೈಸೂರು ಯುವ ದಸರಾ ಸಂಭ್ರಮದಲ್ಲಿ ಚಂದನ್ ಶೆಟ್ಟಿ ಅವರು ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಇದಕ್ಕೆ ಪರ-ವಿರೋಧ ಚರ್ಚೆಗಳು ನಡೆದವು. ಇದೀಗ ಒಳ್ಳೆಯ ದಿನದಂದು ಈ ಜೋಡಿ ರಿಂಗ್ ಬದಲಾಯಿಸಿಕೊಂಡಿದೆ.