ಬಳ್ಳಾರಿಯಲ್ಲಿ ವರನಟ ಡಾ.ರಾಜಕುಮಾರ್ ಜಯಂತಿ ಆಚರಣೆ

ಬಳ್ಳಾರಿಯಲ್ಲಿ ವರನಟ ಡಾ.ರಾಜಕುಮಾರ್ ಜಯಂತಿ ಆಚರಣೆ

YK   ¦    Apr 24, 2020 12:23:32 PM (IST)
ಬಳ್ಳಾರಿಯಲ್ಲಿ ವರನಟ ಡಾ.ರಾಜಕುಮಾರ್ ಜಯಂತಿ ಆಚರಣೆ

ಬಳ್ಳಾರಿ: ನಟಸಾರ್ವಭೌಮ,ವರನಟ ಪದ್ಮಭೂಷಣ ಡಾ.ರಾಜ್ ಕುಮಾರ್ ಜಯಂತಿಯನ್ನು ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿ ಆವರಣದಲ್ಲಿ ಶುಕ್ರವಾರ ಆಚರಿಸಲಾಯಿತು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಅವರು ಡಾ.ರಾಜಕುಮಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವುದರ ಮೂಲಕ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕನ್ನಡ ನಾಡು-ನುಡಿಯ ಅಸ್ಮಿತೆಯ ಪ್ರತೀಕ ಹಾಗೂ ಕನ್ನಡ ಸಂಸ್ಕ್ರತಿಯ ರಾಯಭಾರಿಯಾಗಿರುವ ಡಾ.ರಾಜಕುಮಾರ್ ಅವರು ಕನ್ನಡ ನಾಡು-ನುಡಿ ಮತ್ತು ಸಂಸ್ಕ್ರತಿಗೆ ನೀಡಿದ ಕೊಡುಗೆ ಅಪಾರವಾದುದು ಎಂದರು.

ಕೋವಿಡ್-19 ಹಿನ್ನೆಲೆಯಲ್ಲಿ ಈ ಮಹಾನಟನ ಜಯಂತಿಯನ್ನು ಸಾಂಕೇತಿಕವಾಗಿ ಕಚೇರಿಯಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕಚೇರಿಯ ಅಧೀಕ್ಷಕ ವಿ.ಸಿ.ಗುರುರಾಜ್, ಸಿಬ್ಬಂದಿಗಳಾದ ಗುರುನಾಥ, ಟಿ.ಶಿವು, ಮಲ್ಲೇಶಪ್ಪ,ರೋಜಮ್ಮ,ವಿಜಯಕುಮಾರ್, ದೊಡ್ಡ ಹನುಮಂತ, ಮಂಜುನಾಥ ಮಣಿಗಲ್, ಬಾದಾಮಿ ರಾಧಾಕೃಷ್ಣ,ಸಣ್ಣ ಹನುಮಂತ,ಪತ್ರಕರ್ತರಾದ ವೀರಭದ್ರಗೌಡ,ನರಸಿಂಹಮೂರ್ತಿ ಕುಲಕರ್ಣಿ, ಪತ್ರಿಕಾ ಸಿಬ್ಬಂದಿಗಳಾದ ಸತೀಶ ಮುರಾಳ್, ಜಯತೀರ್ಥ ಕೂಡ್ಲಿಗಿ ಮತ್ತಿತರರು ಇದ್ದರು.