ಕೋರ್ಟಿಗೆ ಹಾಜರಾದ ರಕ್ಷಿತ್ ಶೆಟ್ಟಿ

ಕೋರ್ಟಿಗೆ ಹಾಜರಾದ ರಕ್ಷಿತ್ ಶೆಟ್ಟಿ

Jayashree Aryapu   ¦    Apr 12, 2021 05:02:11 PM (IST)
ಕೋರ್ಟಿಗೆ ಹಾಜರಾದ ರಕ್ಷಿತ್ ಶೆಟ್ಟಿ

ಬೆಂಗಳೂರು: ಕಿರಿಕ್ ಪಾರ್ಟಿ ಸಿನಿಮಾ ಹಾಡಿನ ವಿರುದ್ಧ ಕಾನೂನು ಸಮರಕ್ಕೆ ಲಹರಿ ಸಂಸ್ಥೆ ಮುಂದಾಗಿತ್ತು. ಶಾಂತಿ ಕ್ರಾಂತಿ ಸಿನಿಮಾದ ಹಾಡನ್ನ ಬಳಸಿಕೊಂಡಿದ್ದಾರೆ ಅಂತ ಆರೋಪ ಮಾಡಿತ್ತು. ಈ ನಿಟ್ಟಿನಲ್ಲಿ ಕೇಸ್ ದಾಖಲಾಗಿದ್ದು, ಚಿತ್ರ ತಂಡ ಕೋರ್ಟಿಗೆ ಹಾಜರಾಗಬೇಕಿತ್ತು.

ಕಳೆದ ಕೆಲ ವರ್ಷಗಳಿಂದ ಕೋರ್ಟ್ ನಲ್ಲಿ ಈ ಕೇಸ್ ನ ವಿಚಾರಣೆ ನಡೆಯುತ್ತಿತ್ತು. ವಿಚಾರಣೆಗೆ ಹಾಜಾರಾಗದ ಹಿನ್ನೆಲೆಯಲ್ಲಿ ನಟ ರಕ್ಷಿತ್ ಶೆಟ್ಟಿ ಹಾಗೂ ತಂಡದವರಿಗೆ ಜಾಮೀನು ರಹಿತ ವಾರೆಂಟ್ ನೀಡಲಾಗಿತ್ತು

ಸೋಮವಾರ 9ನೇ ಎಸಿಎಮ್‌ಎಮ್ ಕೋರ್ಟ್ ಮುಂದೆ ಹಾಜಾರಾದ ನಟ ರಕ್ಷಿತ್ ಶೆಟ್ಟಿಗೆ ನಗದು ಶ್ಯೂರಿಟಿ ಕೊಡುವಂತೆ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ. ನ್ಯಾಯಾಲಯದ ಆದೇಶದಂತೆ ನಗದು ಶ್ಯೂರಿಟಿಗೆ ಶೆಟ್ಟಿ ವ್ಯವಸ್ಥೆ ಮಾಡಿದ್ದಾರೆ.

ಕಿರಿಕ್ ಪಾರ್ಟಿಯಲ್ಲಿ ಲಹರಿ ಸಂಸ್ಥೆಗೆ ಸೇರಿದ ಹಾಡನ್ನು, ಯಾರದೇ ಅನುಮತಿ ಇಲ್ಲದೇ ಬಳಕೆ ಮಾಡಿಕೊಂಡಿದ್ದರು ಎಂಬುದು ದೊಡ್ಡ ಸುದ್ದಿಯಾಗಿತ್ತು.

ಈ ಬಗ್ಗೆ ಕ್ರಿಮಿನಲ್ ಮತ್ತು ಸಿವಿಲ್ ಕೇಸ್ ಹಾಕಿದ್ದ ಲಹರಿ ರೆಕಾರ್ಡಿಂಗ್ಸ್ ಕಾನೂನು ಹೋರಾಟ ಆರಂಭಿಸಿತ್ತು. ಕಾಪಿ ರೈಟ್ಸ್ ಆಕ್ಟ್ 63ಎ ಮತ್ತು 63 ಬಿ ಅಡಿಯಲ್ಲಿ ಕೇಸ್ ಹಾಕಲಾಗಿತ್ತು. ಸೆಪ್ಟಂಬರ್ 28, 2019 ರಲ್ಲಿ ಕೇಸು ದಾಖಲಾಗಿದ್ದು, ಅರ್ಜಿಯಲ್ಲಿ ಸಿನಿಮಾ ರಿಲೀಸ್ ಮಾಡದಂತೆ ಕೋರಿಕೆ ಮಾಡಲಾಗಿತ್ತು. ಆದರೆ ಕೊನೆಗೆ ಆಡರ್ ಟೆಕಿಂಗ್ ಪಡೆದುಕೊಂಡು ಸಿನಿಮಾ ರಿಲೀಸ್ ಆಗಿತ್ತು. ಈ ಸಂದರ್ಭ ಕ್ರಿಮಿನಲ್ ಕೇಸ್ ವಿಚಾರಣೆ ಎಸಿಎಂಎಂ ಕೋರ್ಟ್ ನಲ್ಲಿ ಮುಂದುವರೆದಿತ್ತು.