ವಿಷ್ಣು ಸ್ಮರಣೆ: ಉಪ್ಪಿ, ಶ್ರುತಿಗೆ ಜನ್ಮದಿನದ ಸಂಭ್ರಮ

ವಿಷ್ಣು ಸ್ಮರಣೆ: ಉಪ್ಪಿ, ಶ್ರುತಿಗೆ ಜನ್ಮದಿನದ ಸಂಭ್ರಮ

YK   ¦    Sep 18, 2020 10:23:30 AM (IST)
ವಿಷ್ಣು ಸ್ಮರಣೆ: ಉಪ್ಪಿ, ಶ್ರುತಿಗೆ ಜನ್ಮದಿನದ ಸಂಭ್ರಮ

ಡಾ. ವಿಷ್ಣುವರ್ಧನ್ ಅವರು ಕನ್ನಡಿಗರ ಮನದಲ್ಲಿ ಎಂದೆದೂ ಅಮರವಾಗಿ ಉಳಿದಿರುವ ಕನ್ನಡದ ಮೇರು ನಟ. ಇಂದು ನಟ ವಿಷ್ಣುವರ್ಧನ್ ಅವರಿಗೆ 70ನೇ ವರ್ಷದ ಹುಟ್ಟುಹಬ್ಬ. ಇಂದು ವಿಷ್ಣುವರ್ಧನ್ ನಮ್ಮೊಂದಿಗಿಲ್ಲದಿದ್ದರೂ ಅವರ ನೆನಪುಗಳು ಮಾತ್ರ ಚಿರಸ್ಥಾಯಿ. ‌

ವಿಷ್ಣುವರ್ಧನ್ ಅವರು 11 ವರ್ಷಗಳ ಹಿಂದೆ ನಿಧನರಾಗಿದ್ದು, ಬಹುನಿರೀಕ್ಷೆಯ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಚೆಗೆ ಭೂಮಿಪೂಜೆ ನೆರವೇರಿಸಿದ್ದರು.

ಇಂದು ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ಶ್ರುತಿ, ರಿಯಲ್ ಸ್ಟಾರ್ ಉಪೇಂದ್ರ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ಇವರಿಗೆ ಶುಭಾಶಯದ ಮಹಾಪೂರವೇ ಹರಿದುಬರುತ್ತಿದೆ. ಚಿತ್ರರಂಗದ ಗಣ್ಯರು ಕೂಡ ಇವರಿಗೆ ಶುಭ ಹಾರೈಸಿದ್ದಾರೆ.