‘ಉಪಾಧ್ಯಕ್ಷ’ನಾಗಲು ಹೊರಟ ಚಿಕ್ಕಣ್ಣ

‘ಉಪಾಧ್ಯಕ್ಷ’ನಾಗಲು ಹೊರಟ ಚಿಕ್ಕಣ್ಣ

Keerthana Bhat   ¦    Sep 17, 2020 02:49:40 PM (IST)
‘ಉಪಾಧ್ಯಕ್ಷ’ನಾಗಲು ಹೊರಟ ಚಿಕ್ಕಣ್ಣ

ಬೆಂಗಳೂರು: ಕನ್ನಡದ ಪ್ರಸಿದ್ಧ ಹಾಸ್ಯ ಕಲಾವಿದ ನಟ ಚಿಕ್ಕಣ್ಣ ನಾಯಕನ ಪಾತ್ರಕ್ಕೆ ಭಡ್ತಿ ಪಡೆಯಲಿದ್ದಾರೆ. ಚಂದ್ರ ಮೋಹನ್ ನಿರ್ದೇಶನದ ಉಪಾಧ್ಯಾಕ್ಷ ಚಿತ್ರದಲ್ಲಿ ಅವರು ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.

ಸಾಧು ಕೋಕಿಲಾ ಮತ್ತು ಇತರ ನಟರು ಅಭಿನಯಿಸಲಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಲಿದ್ದಾರೆ.

ನಿರ್ದೇಶಕ ಚಂದ್ರ ಮೋಹನ್ ಅವರ ಪ್ರಕಾರ ಈ ಚಿತ್ರ ಮಂಡ್ಯ ಗ್ರಾಮದ ಯುವಕನ ಕುರಿತಾದ ಕತೆಯನ್ನು ಹೊಂದಿದೆ. ಚಿಕ್ಕಣ್ಣನ ಹಾಸ್ಯ ಪ್ರಜ್ಞೆಯನ್ನು ಗಮನದಲ್ಲಿಟ್ಟುಕೊಂಡು ಕಥೆಯನ್ನು ಸಿದ್ಧಪಡಿಸಲಾಗಿದೆ’ ಎಂದು ಅವರು ಹೇಳಿದರು.

ಮುಖ್ಯ ಪಾತ್ರಕ್ಕಾಗಿ ಚಿಕ್ಕಣ್ಣ ಈ ಹಿಂದೆ ಸಮೋಸಾ ಎಂಬ ಹೆಸರಿನ ಚಿತ್ರಕ್ಕೆ ಸಹಿ ಹಾಕಿದ್ದರು. ವಿವಿಧ ಕಾರಣಗಳಿಂದ ಆ ಚಿತ್ರ ಪ್ರಾರಂಭವಾಗಲಿಲ್ಲ.