ನಟಿ ಶ್ರೀದೇವಿ ಸಾವಿನ ಸ್ಫೋಟಕ ಮಾಹಿತಿ ಬಹಿರಂಗ

ನಟಿ ಶ್ರೀದೇವಿ ಸಾವಿನ ಸ್ಫೋಟಕ ಮಾಹಿತಿ ಬಹಿರಂಗ

HSA   ¦    Jul 12, 2019 06:03:33 PM (IST)
ನಟಿ ಶ್ರೀದೇವಿ ಸಾವಿನ ಸ್ಫೋಟಕ ಮಾಹಿತಿ ಬಹಿರಂಗ

ತಿರುವನಂತಪುರಂ: ಬಹುಭಾಷಾ ನಟಿ ಶ್ರೀದೇವಿ ಸಾವಿನ ಬಗ್ಗೆ ಸ್ಫೋಟಕ ಮಾಹಿತಿಯೊಂದನ್ನು ಕೆರಳದ ಡಿಜಿಪಿಯೊಬ್ಬರು ಹೊರಹಾಕಿದ್ದಾರೆ.

ಮದುವೆ ಕಾರ್ಯಕ್ರಮಕ್ಕೆಂದು ತೆರಳಿದ್ದ ನಟಿ ಶ್ರೀದೇವಿ ಅವರು ದುಬೈಯ ಹೋಟೆಲ್ ನ ಬಾತ್ ಟಬ್ ನಲ್ಲಿ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದರು. ಇವರ ಸಾವಿನ ಬಗ್ಗೆ ಊಹಾಪೋಹಗಳು ಎದ್ದಿದ್ದವು. ಸಾವಿನ ಬಳಿಕ ಶ್ರೀದೇವಿ ಮೃತದೇಹವನ್ನು ಸ್ವದೇಶಕ್ಕೆ ತರಲು ತುಂಬಾ ದಿನಗಳು ಬೇಕಾಗಿದ್ದವು. ಇದೆಲ್ಲವೂ ಹಲವಾರು ಅನುಮಾನಗಳನ್ನು ಹುಟ್ಟುಹಾಕಿದ್ದವು.

ಫೆ.24, 2018ರಂದು ಈ ಘಟನೆ ನಡೆದಿದ್ದು, ಶ್ರೀದೇವಿ ಬಾತ್ ಟಬ್ ನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಪೊಲೀಸ್ ಅಧಿಕಾರಿಗಳು ಹೇಳಿದ್ದರು. ಮರಣೋತ್ತರ ಪರೀಕ್ಷೆಯಲ್ಲೂ ಇದನ್ನೇ ಹೇಳಲಾಗಿತ್ತು.

ಆದರೆ ಕೇರಳ ಡಿಜಿಪಿ ರಿಷಿರಾಜ್ ಸಿಂಗ್ ಅವರು ಕೇರಳದ ಕೌಮುದಿ ಎನ್ನುವ ಪತ್ರಿಕೆಯಲ್ಲಿ ಬರೆದಿರುವ ಅಂಕಣದಲ್ಲಿ ಶ್ರೀದೇವಿ ಅವರು ಮುಳುಗಿ ಸಾವನ್ನಪ್ಪಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ವಿವರಣೆ ನೀಡಿರುವ ಅವರು ನಾನು ಹಾಗೂ ನನ್ನ ಸ್ನೇಹಿತ ಫೋರೆನಿಕ್ಸ್ ತಜ್ಞ ದಿವಂಗತ ಡಾ. ಉಮದಾತನ್ ಅವರ ಬಳಿ ಚರ್ಚೆ ಮಾಡುತ್ತಿದ್ದ ವೇಳೆ ಶ್ರೀದೇವಿ ಅವರ ಬಗ್ಗೆ ಹೀಗೆ ಹೇಳಿದ್ದರು ಎಂದು ಸಿಂಗ್ ಬರೆದಿದ್ದಾರೆ.

ಒಂದು ಅಡಿ ಆಳದ ನೀರಿರುವ ಟಬ್ ನಲ್ಲಿ ಯಾರು ಎಷ್ಟೇ ಮದ್ಯ ಸೇವಿಸಿದರೂ ಮುಳುಗಿ ಸಾವನ್ನಪ್ಪಲು ಸಾಧ್ಯವಿಲ್ಲ. ಕಾಲುಗಳನ್ನು ಕಟ್ಟಿ ನೀರಿನೊಳಗೆ ಒತ್ತಿ ಹಿಡಿದರೆ ಮಾತ್ರ ಮುಳುಗಿ ಸಾಯಬಹುದು ಎಂದು ಉಮದಾತನ್ ಹೇಳಿರುವುದಾಗಿ ಸಿಂಗ್ ಅಂಕಣದಲ್ಲಿ ಬರೆದಿದರುವರು.