ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪಾತ್ರರಾದ ಬಾಲಿವುಡ್‌ ಕಲಾವಿದರು

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪಾತ್ರರಾದ ಬಾಲಿವುಡ್‌ ಕಲಾವಿದರು

MS   ¦    Feb 22, 2021 01:53:39 PM (IST)
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪಾತ್ರರಾದ ಬಾಲಿವುಡ್‌ ಕಲಾವಿದರು

ಮುಂಬೈ : 2021ರ ' ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗೆ ಬಾಲಿವುಡ್‌ನ ಹಲವು ತಾರೆಯರು ಭಾಜನರಾಗಿದ್ದು, ಸಮನ್‌ಂಭದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬಾಲಿವುಡ್‌ನ ದೀಪಿಕಾ ಪಡುಕೋಣೆ , ಅಕ್ಷಯ್ ಕುಮಾರ್ , ಸುಶ್ಮಿತಾ ಸೇನ್ , ಸುಶಾಂತ್ ಸಿಂಗ್ ರಜಪೂತ್ ವಿವಿಧ ಪ್ರಶಸ್ತಿಗಳು ಲಭಿಸಿವೆ.

ಆ್ಯಸಿಡ್ ದಾಳಿಗೆ ತುತ್ತಾಗಿ ಬದುಕುಳಿದ ಲಕ್ಷ್ಮಿ ಅಗರ್ವಾಲ್ ಜೀವನಗಾಥೆಯ , ಮೇಘನಾ ಗುಲ್ದಾರ್‌ ನಿರ್ದೇಶನದ ' ಚಪಾಕ್ ' ಚಿತ್ರದ ನಟನೆಗಾಗಿ ದೀಪಿಕಾ ಪಡುಕೋಣೆಗೆ ಉತ್ತಮ ನಟಿ ' ಪ್ರಶಸ್ತಿ, ಹಾರರ್- ಕಾಮಿಡಿ ' ಲಕ್ಷ್ಮಿ ' ಚಿತ್ರದ ನಟನೆಗಾಗಿ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್‌ಗೆ ಉತ್ತಮ ನಟ ಪ್ರಶಸ್ತಿ ದೊರೆತಿದೆ .

ನೆಟ್ ಫಿಕ್ಸ್ನ ಗಿಲ್ಟಿ ' ಸಿನಿಮಾದ ಅತ್ಯುತ್ತಮ ನಟನೆಗಾಗಿ ಕಿಯಾರಾ ಅಡ್ವಾಣಿ ' ವಿಮರ್ಶಕರ ಉತ್ತಮ ನಟಿ ' ಎನಿಸಿದ್ದಾರೆ . ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ' ಚಿಚೋರೆ ' ಯಲ್ಲಿನ ಅಭಿನಯಕ್ಕಾಗಿ ಮರಣೋತ್ತರವಾಗಿ ' ವಿಮರ್ಶಕರ ಉತ್ತಮ ನಟ ' ಗೌರವ ಸಿಕ್ಕಿದೆ. ವೆಬ್ ಸೀರಿಸ್ ವಿಭಾಗದಲ್ಲಿನ ಉತ್ತಮ ನಟಿ ' ಪ್ರಶಸ್ತಿ “ ಆರ್ಯ ' ಚಿತ್ರಕ್ಕಾಗಿ ಸುಶ್ಮಿತಾ ಸೇನ್ ಪಾಲಾಗಿದೆ .