ನಟ ಅರುಣ್ ಬಕ್ಷಿ ಬಿಜೆಪಿಗೆ ಸೇರ್ಪಡೆ

ನಟ ಅರುಣ್ ಬಕ್ಷಿ ಬಿಜೆಪಿಗೆ ಸೇರ್ಪಡೆ

YK   ¦    May 11, 2019 03:32:33 PM (IST)
ನಟ ಅರುಣ್ ಬಕ್ಷಿ ಬಿಜೆಪಿಗೆ ಸೇರ್ಪಡೆ

ನವದೆಹಲಿ: ನಟ ಹಾಗೂ ಗಾಯಕ ಅರುಣ್ ಬಕ್ಷಿ ಇಂದು ಬಿಜೆಪಿಗೆ ಸೇರ್ಪಡೆಗೊಂಡರು. ಪಕ್ಷದ ನಾಯಕ, ಛತ್ತೀಸ್ ಘರ್ ಮಾಜಿ ಸಿಎಂ ರಮನ್ ಸಿಂಗ್ ಅವರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ನಂತರ ಮಾತನಾಡಿದ ನಟ ಅರುಣ್ , ಬಿಜೆಪಿಯ ಸಿದ್ಧಾಂತಕ್ಕೆ ಯಾವತ್ತೂ ಬೆಂಲಿಸುತ್ತಿದ್ದೆ. ಅದಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರಕ್ಕೆ ಮೆಚ್ಚಿ ಬಿಜೆಪಿ ಸೇರ್ಪಡೆಗೊಂಡಿದ್ದಾನೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಬಳಿಕ ಮೋದಿ ಹಾಗೇ ಮತ್ತೊಬ್ಬ ನಾಯಕನನ್ನು ನೋಡಿಲ್ಲ.

ಬಿಜೆಪಿಗೆ ಸೇರ್ಪಡಗೊಳ್ಳುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದರು.

ಅರುಣ್ ಅವರು 100ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಸುಮಾರು 298 ಹಾಡಿಗೆ ಹಿನ್ನೆಲೆ ಗಾಯಕರಾಗಿದ್ದಾರೆ. ಪಂಜಾಬಿ ಹಾಗೂ ಭೋಜ್ ಪುರಿ ಚಿತ್ರರಂಗದಲ್ಲಿಯೂ ಗುರುತಿಸಿಕೊಂಡಿದ್ದಾರೆ.