ಕಾಜೋಲ್-ನ್ಯಾಸ ಆರೋಗ್ಯವಾಗಿದ್ದಾರೆ: ಅಜಯ್ ದೇವಗನ್ ಸ್ಪಷ್ಟನೆ

ಕಾಜೋಲ್-ನ್ಯಾಸ ಆರೋಗ್ಯವಾಗಿದ್ದಾರೆ: ಅಜಯ್ ದೇವಗನ್ ಸ್ಪಷ್ಟನೆ

HSA   ¦    Mar 31, 2020 05:28:03 PM (IST)
ಕಾಜೋಲ್-ನ್ಯಾಸ ಆರೋಗ್ಯವಾಗಿದ್ದಾರೆ: ಅಜಯ್ ದೇವಗನ್ ಸ್ಪಷ್ಟನೆ

ಮುಂಬಯಿ: ಕೊರೋನಾ ವೈರಸ್ ವಿಶ್ವದೆಲ್ಲೆಡೆಯಲ್ಲಿ ತಲ್ಲಣ ಉಂಟು ಮಾಡಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸುವುದರಲ್ಲಿ ನಿರತರಾಗಿದ್ದಾರೆ. ಬಾಲಿವುಡ್ ನಟ ಅಜಯ್ ದೇವಗನ್ ಅವರ ಕುಟುಂಬದ ಬಗ್ಗೆ ಕೂಡ ಇಂತಹ ಸುದ್ದಿಯೊಂದು ಹಬ್ಬಿದೆ.

ದೇವಗನ್ ಪತ್ನಿ ಕಾಜೋಲ್ ಮತ್ತು ಪುತ್ರಿ ನ್ಯಾಸ ಕೊರೋನಾ ಪಾಸಿಟಿವ್ ಆಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬಿತ್ತು. ಆದರೆ ಇದಕ್ಕೆ ಟ್ವೀಟ್ ಮಾಡಿರುವ ದೇವಗನ್, ಅವರಿಬ್ಬರು ಆರೋಗ್ಯವಾಗಿದ್ದಾರೆ ಎಂದು ಬರೆದಿದ್ದಾರೆ.

ಕೇಳಿರುವುದಕ್ಕೆ ಧನ್ಯವಾದಗಳು, ಕಾಜೋಲ್ ಮತ್ತು ನ್ಯಾಸ ಆರೋಗ್ಯವಾಗಿದ್ದಾರೆ. ಅವರ ಆರೋಗ್ಯದ ಬಗ್ಗೆ ಹಬ್ಬಿರುವಂತಹ ಸುದ್ದಿಯು ಸುಳ್ಳು ಮತ್ತು ಹುರುಳಿಲ್ಲದ್ದು ಎಂದು ದೇವಗನ್ ಹೇಳಿದ್ದಾರೆ.

ಕಾಜೋಲ್ ಮತ್ತು ನ್ಯಾಸ ಕೆಲವು ದಿನಗಳ ಹಿಂದೆ ಸಿಂಗಾಪುರದಿಂದ ಮರಳಿದ್ದರು. ಇದೇ ಕಾರಣದಿಂದಾಗಿ ಇಂತಹ ಸುದ್ದಿ ಹಬ್ಬಿತ್ತು. ಆದರೆ ಅವರಿಬ್ಬರು ಮನೆಯಲ್ಲೇ ಸ್ವಯಂ ಐಸೋಲೇಷನ್ ಗೆ ಒಳಗಾಗಿದ್ದಾರೆ ಎಂದಿದ್ದಾರೆ.