ಫಿಲ್ಮ್ ‌ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ: ಜಗ್ಗೇಶ್ ಅತ್ಯುತ್ತಮ ನಟ, ಅದಿತಿ ಪ್ರಭದೇವ್ ಗೆ ಅತ್ಯುತ್ತಮ ನಟಿ ಪ್ರಶಸ್ತಿ

ಫಿಲ್ಮ್ ‌ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ: ಜಗ್ಗೇಶ್ ಅತ್ಯುತ್ತಮ ನಟ, ಅದಿತಿ ಪ್ರಭದೇವ್ ಗೆ ಅತ್ಯುತ್ತಮ ನಟಿ ಪ್ರಶಸ್ತಿ

YK   ¦    Feb 09, 2020 10:01:25 AM (IST)
ಫಿಲ್ಮ್ ‌ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ: ಜಗ್ಗೇಶ್ ಅತ್ಯುತ್ತಮ ನಟ, ಅದಿತಿ ಪ್ರಭದೇವ್ ಗೆ ಅತ್ಯುತ್ತಮ ನಟಿ ಪ್ರಶಸ್ತಿ

ಬೆಂಗಳೂರು: 2019ನೇ ಸಾಲಿನ ಚಿತ್ರಗಳಿಗೆ 'ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ' ನೀಡುವ ಮೊದಲ ವರ್ಷದ ಸಿನಿಮಾ ಪ್ರಶಸ್ತಿಗಳು ಪ್ರಕಟವಾಗಿದ್ದು ರಮೇಶ್ ಇಂದಿರಾ ನಿರ್ದೇಶನದ 'ಪ್ರೀಮಿಯರ್ ಪದ್ಮಿನಿ' ಚಿತ್ರವು 'ಅತ್ಯುತ್ತಮ ಸಿನಿಮಾ' ಪ್ರಶಸ್ತಿ ಪಡೆದುಕೊಂಡಿದೆ.

ಅತ್ಯುತ್ತಮ ನಟ ಪ್ರಶಸ್ತಿಗೆ ಜಗ್ಗೇಶ್ (ಪ್ರೀಮಿಯರ್ ಪದ್ಮಿನಿ ಚಿತ್ರದ ಅಭಿನಯಕ್ಕೆ), ಅತ್ಯುತ್ತಮ ನಟಿ ಪ್ರಶಸ್ತಿಗೆ ಅದಿತಿ ಪ್ರಭುದೇವ (ರಂಗನಾಯಕಿ ಚಿತ್ರದ ನಟನೆಗೆ) ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಯನ್ನು ಶನಿವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.

ಇತರ ಪ್ರಶಸ್ತಿಗಳ ವಿವರ: ಕಲಾ ನಿರ್ದೇಶನ: ಉಲ್ಲಾಸ್ (ಅವನೇ ಶ್ರೀಮನ್ನಾರಾಯಣ), ವಿಎಫ್ ಎಕ್ಸ್: ಅವನೇ ಶ್ರೀಮನ್ನಾರಾಯಣ, ಸಾಹಸ: ಅವನೇ ಶ್ರೀಮನ್ನಾರಾಯಣ, ನೃತ್ಯ ನಿರ್ದೇಶನ: ಇಮ್ರಾನ್ ಸರ್ದಾರಿಯಾ (ಅವನೇ ಶ್ರೀಮನ್ನಾರಾಯಣ), ಸಂಕಲನ: ರಾಜೇಂದ್ರ ಅರಸ್ (ಪ್ರೀಮಿಯರ್ ಪದ್ಮಿನಿ), ಗೀತ ಸಾಹಿತ್ಯ: ಪ್ರಮೋದ್ ಮರವಂತೆ (ಮುಂದಿನ ನಿಲ್ದಾಣ), ಗಾಯಕಿ: ಅದಿತಿ ಸಾಗರ್ (ಕವಲುದಾರಿ), ಗಾಯಕ: ಕಡಬಗೆರೆ ಮುನಿರಾಜು (ಬೆಲ್ ಬಾಟಮ್), ಛಾಯಾಗ್ರಹಣ: ಕರಂ ಚಾವ್ಲಾ (ಅವನೇ ಶ್ರೀಮನ್ನಾರಾಯಣ), ಸಂಭಾಷಣೆ: ಕವಿರಾಜ್ (ಕಾಳಿದಾಸ ಕನ್ನಡ ಮೇಷ್ಟ್ರು).

ಹಿನ್ನೆಲೆ ಸಂಗೀತ: ಅಜನೀಶ್ ಲೋಕನಾಥ್ (ಅವನೇ ಶ್ರೀಮನ್ನಾರಾಯಣ), ಸಂಗೀತ: ಅಜನೀಶ್ ಲೋಕನಾಥ್ (ಬೆಲ್ ಬಾಟಮ್), ಬಾಲ ಕಲಾವಿದೆ: ಐಶ್ವರ್ಯಾ ಉಪೇಂದ್ರ (ದೇವಕಿ), ಪೋಷಕ ನಟಿ: ಸೋನು ಗೌಡ (ಐ ಲವ್ ಯು) ಮತ್ತು ಭಾಗೀರಥಿಬಾಯಿ (ಮಿಸ್ಸಿಂಗ್ ಬಾಯ್), ಪೋಷಕ ನಟ: ಅನಂತನಾಗ್ (ಕವಲುದಾರಿ), ಚಿತ್ರಕಥೆ: ಜಯತೀರ್ಥ (ಬೆಲ್ ಬಾಟಮ್).