ಕೋವಿಡ್-19ಗೆ ಪಾಸಿಟಿವ್ ಆಗಿರುವ ಗಾಯಕ ಎಸ್ ಪಿ ಆರೋಗ್ಯ ಸ್ಥಿರ

ಕೋವಿಡ್-19ಗೆ ಪಾಸಿಟಿವ್ ಆಗಿರುವ ಗಾಯಕ ಎಸ್ ಪಿ ಆರೋಗ್ಯ ಸ್ಥಿರ

HSA   ¦    Aug 14, 2020 03:36:56 PM (IST)
ಕೋವಿಡ್-19ಗೆ ಪಾಸಿಟಿವ್ ಆಗಿರುವ ಗಾಯಕ ಎಸ್ ಪಿ ಆರೋಗ್ಯ ಸ್ಥಿರ

ಚೆನ್ನೈ: ಕೊರೋನಾ ಪಾಸಿಟಿವ್ ಆದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಖ್ಯಾತ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿಗಳು ಹೇಳಿವೆ.

ಚೆನ್ನೈನ ಎಂಜಿಎಂ ಹೆಲ್ತ್ ಕೇರ್ ಆಸ್ಪತ್ರೆಯಲ್ಲಿ ಅವರು ದಾಖಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಹೇಳಲಾಗಿದೆ.

ಬಾಲಸುಬ್ರಹ್ಮಣ್ಯಂ ಅವರಿಗೆ ಆಗಸ್ಟ್ 5ರಂದು ಶೀತ, ಜ್ವರ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಇದರ ಬಳಿಕ ಪರೀಕ್ಷೆಯಲ್ಲಿ ವರದಿ ಪಾಸಿಟಿವ್ ಆಗಿತ್ತು.