ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ಗೆ ಕೊರೋನಾ ಸೋಂಕು ದೃಡ

ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ಗೆ ಕೊರೋನಾ ಸೋಂಕು ದೃಡ

MS   ¦    Apr 07, 2021 04:00:14 PM (IST)
ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ಗೆ ಕೊರೋನಾ ಸೋಂಕು ದೃಡ

ಮುಂಬೈ : ಕೊರೋನಾ ಎರಡನೇ ಅಲೆಯ ಅಬ್ಬರದಲ್ಲಿ ಈಗಾಗಲೇ ಹಲವು ಗಣ್ಯ ವ್ಯಕ್ತಿಗಳು ತುತ್ತಾಗಿದ್ದು, ಇದೀಗ ಖ್ಯಾತ ನಟಿ ಕತ್ರೀನಾ ಕೈಫ್ ಕೊರೋನಾ ಸೋಂಕು ದೃಡಪಟ್ಟಿದೆ . ಕೊರೋನಾ ಸೋಂಕಿತರಾಗಿರುವ ಕತ್ರೀನಾ ಕೈಫ್ , ಮನೆಯಲ್ಲಿ ಕ್ವಾರಂಟೈನ್ ಆಗಿದ್ದಾರೆ .

ಸಾಮಾಜಿಕ ಜಾಲ ತಾಣದ ಮೂಲಕ ಕೊರೋನಾ ಸೋಂಕಿಗೆ ತುತ್ತಾಗಿರುವ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ . ಕತ್ರೀನಾ ಕೈಫ್ ಅವರ ನಿಕಟವರ್ತಿ ಎಂದು ಹೇಳಲಾಗುತ್ತಿರುವ ನಟ ವಿಕ್ಕಿ ಕೌಶಲ್ ಕೂಡ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ . ಹಿಂದಿ ಚಿತ್ರರಂಗದ ಅಕ್ಷಯ ಕುಮಾರ್ ಕೂಡ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ .

ಇನ್ನು ಪ್ರಸ್ತುತತೆ ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1,15,736 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಹಾಗೂ 630 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1,28,01,785 ಕ್ಕೆ ತಲುಪಿದ್ದು, ಮಾರಕ ಕೊರೋನಾ ಇದುವರೆಗೆ 1,66,177 ಮಂದಿಯ ಪ್ರಾಣ ಅಪಹರಿಸಿದೆ .

ಕೊರೋನಾ ಸೋಂಕಿತರಾಗಿದ್ದ 1,17,92,155 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ . ದೇಶದ ವಿವಿಧ ಆಸ್ಪತ್ರೆಗಳಲ್ಲಿ 8,43,473 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ . ದೇಶದಲ್ಲಿ ಇದುವರೆಗೆ 8,70,77,474 ಮಂದಿಗೆ ಕೊರೋನಾ ತಡೆ ಲಸಿಕೆ ನೀಡಲಾಗಿದೆ .