ಮಂಡ್ಯಕ್ಕೆ ನಟ ಸೃಜನ್ ಲೋಕೇಶ್ ಭೇಟಿ

ಮಂಡ್ಯಕ್ಕೆ ನಟ ಸೃಜನ್ ಲೋಕೇಶ್ ಭೇಟಿ

LK   ¦    Oct 15, 2019 08:15:19 PM (IST)
ಮಂಡ್ಯಕ್ಕೆ ನಟ ಸೃಜನ್ ಲೋಕೇಶ್ ಭೇಟಿ

ಮಂಡ್ಯ: ಎಲ್ಲಿದ್ದೆ ಇಲ್ಲಿ ತನಕ ಚಲನಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ನಗರದ ಮಹಾವೀರ ಚಿತ್ರಮಂದಿರಕ್ಕೆ ಚಿತ್ರ ನಟ ಸೃಜನ್ ಲೋಕೇಶ್, ನಿರ್ದೇಶಕ ತೇಜಸ್ವಿ ಹಾಗೂ ತಂಡ ಭೇಟಿ ನೀಡಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸೃಜನ್ ಲೋಕೇಶ್, ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ದೊರೆತಿದೆ. ಜನತೆ ಸಿನಿಮಾ ನೋಡಿ ಬಹಳ ಸಂತೋಷಪಟ್ಟಿದ್ದಾರೆ. ನಮ್ಮ ಸಿನಿಮಾದ ಬಗ್ಗೆ ನಾವು ಮಾತನಾಡಬಾರದು. ಜನತೆ ಮಾತನಾಡಬೇಕು ಎಂದರು. ಬೆಂಗಳೂರು, ಕಾಶ್ಮೀರ, ಮಲೇಷಿಯಾ ಇನ್ನಿತರೆ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ರಾಜ್ಯದಲ್ಲಿ 120 ಕೇಂದ್ರಗಳಲ್ಲಿ ಬಿಡುಗಡೆಯಾಗಿದೆ. ಮುಂದಿನ ವಾರ ಮತ್ತಷ್ಟು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು. ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಚಿತ್ರಮಂದಿರದ ಸಿಬ್ಬಂದಿಗಳಿಗೆ ಬಟ್ಟೆ ವಿತರಿಸಲಾಯಿತು. ಸೃಜನ್ ಲೋಕೇಶ್ ಅಭಿಮಾನಿಗಳ ಸಂಘದ ಶ್ರೀನಿವಾಸ್, ಶಿವಣ್ಣ, ಸೋಮ, ಮಹದೇವು, ರವಿ, ಶ್ರೀಕಾಂತ್ ಇತರರಿದ್ದರು.