‘ದೇಯಿ ಬೈದೆತಿ’ ಚಿತ್ರಕ್ಕೆ ಮತ್ತೊಂದು ಪ್ರಶಸ್ತಿಯ ಗರಿ

‘ದೇಯಿ ಬೈದೆತಿ’ ಚಿತ್ರಕ್ಕೆ ಮತ್ತೊಂದು ಪ್ರಶಸ್ತಿಯ ಗರಿ

YK   ¦    Jan 10, 2020 04:49:25 PM (IST)
‘ದೇಯಿ ಬೈದೆತಿ’ ಚಿತ್ರಕ್ಕೆ ಮತ್ತೊಂದು ಪ್ರಶಸ್ತಿಯ ಗರಿ

ಬೆಂಗಳೂರು:2018ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಇಂದು ಪ್ರಕಟವಾಗಿದ್ದು, ಅತ್ಯುತ್ತಮ ಭಾಷಾ ಪ್ರಶಸ್ತಿ ತುಳು ಭಾಷೆಯ ‘ದೇಯಿ ಬೈದೆತಿ’ ಚಿತ್ರಕ್ಕೆ ಲಭಿಸಿದೆ.

ಸಂಕ್ರಿ ಮೋಷನ್ ಪಿಕ್ಚರ್ ಬ್ಯಾನರ್ ಅಡಿಯಲ್ಲಿ ಫೆ. 15ರಂದು ಕರಾವಳಿಯಾದ್ಯಂತ ಬಿಡುಗಡೆಯಾದ ದೇಯಿ ಬೈದೆತಿ ಚಿತ್ರ ಯಶಸ್ವಿ ಪ್ರದರ್ಶನವನ್ನು ಕಾಣಿತ್ತು. ಚಿತ್ರವನ್ನು ನಿರ್ದೇಶಕ ಸೂರ್ಯೊದಯ್ ಪೆರಂಪಳ್ಳಿ ಅವರು ನಿರ್ದೇಶನ ಮಾಡಿದ್ದರು.

ಈ ಚಿತ್ರವು ದೇಯಿ ಬೈದೆತಿಯ ಹುಟ್ಟಿನಿಂದ ಅಂತ್ಯದವರೆಗಿನ ಕಥೆಯನ್ನು ಹೇಳಿತ್ತು.