ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ: ಸ್ನೇಹಿತ ಸಂದೀಪ್ ಸಿಂಗ್ ವಿಚಾರಣೆ

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ: ಸ್ನೇಹಿತ ಸಂದೀಪ್ ಸಿಂಗ್ ವಿಚಾರಣೆ

HSA   ¦    Jun 25, 2020 03:37:24 PM (IST)
ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ: ಸ್ನೇಹಿತ ಸಂದೀಪ್ ಸಿಂಗ್ ವಿಚಾರಣೆ

ಮುಂಬಯಿ: ಉದಯೋನ್ಮುಖ ನಟ ಸುಶಾಂತ್ ಸಿಂಗ್ ರಾಜಪುತ್ ಆತ್ಮಹತ್ಯೆ ಪ್ರಕರಣದಲ್ಲಿ ಅವರ ಆಪ್ತ ಸ್ನೇಹಿತ ಸಂದೀಪ್ ಸಿಂಗ್ ನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಗುರುವಾರ ಮಧ್ಯಾಹ್ನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಸಂದೀಪ್ ಸಿಂಗ್ ಹಾಜರಾಗಿರುವರು ಎಂದು ವರದಿಗಳು ಹೇಳಿವೆ.

ಈಗಾಗಲೇ ಕುಟುಂಬ ಸದಸ್ಯರು, ಪಿಆರ್ ಮ್ಯಾನೇಜರ್, ಸಿಬ್ಬಂದಿ ಮತ್ತು ಆಪ್ತ ಸ್ನೇಹಿತೆ ರಹೆಯಾ ಚಕ್ರವರ್ತಿ ಸಹಿತ ಸುಮಾರು 23 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಇದುವರೆಗೆ ಬಂದ ಮರಣೋತ್ತರ ಪರೀಕ್ಷೆಯಲ್ಲಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿದೆ. ಆದರೆ ಪೊಲೀಸರು ಇನ್ನಷ್ಟು ಇದರ ಬಗ್ಗೆ ತನಿಖೆ ನಡೆಸುತ್ತಿದ್ದು, ಫಾರೆನ್ಸಿಕ್ ವರದಿಯನ್ನು ಕಾಯುತ್ತಿದ್ದಾರೆ.

ಜೂನ್ 14ರಂದು ಸುಶಾಂತ್ ಸಿಂಘ್ ಬಾಂದ್ರಾದಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.