ಐಶ್ವರ್ಯ ರೈ ಬಗ್ಗೆ ಕೀಳು ಮಟ್ಟದ ಫೋಟೋ ಟ್ವೀಟ್ ಮಾಡಿದ ನಟ ವಿವೇಕ್ ಒಬೆರಾಯ್

ಐಶ್ವರ್ಯ ರೈ ಬಗ್ಗೆ ಕೀಳು ಮಟ್ಟದ ಫೋಟೋ ಟ್ವೀಟ್ ಮಾಡಿದ ನಟ ವಿವೇಕ್ ಒಬೆರಾಯ್

YK   ¦    May 20, 2019 06:06:39 PM (IST)
ಐಶ್ವರ್ಯ ರೈ ಬಗ್ಗೆ ಕೀಳು ಮಟ್ಟದ ಫೋಟೋ ಟ್ವೀಟ್ ಮಾಡಿದ ನಟ ವಿವೇಕ್ ಒಬೆರಾಯ್

ನಟ ವಿವೇಕ್ ಒಬೆರಾಯ್ ಅವರು ಲೋಕಸಭೆ ಚುನಾವಣೋತ್ತರ ಸಮೀಕ್ಷೆ ಬಗ್ಗೆ ನಟಿ ಐಶ್ವರ್ಯ ರೈ ಜತೆಗಿನ ತಮ್ಮ ವೈಯ್ಯಕ್ತಿಕ ಸಂಬಂಧದ ಬಗ್ಗೆ ಕೀಳು ಮಟ್ಟದ ಫೋಟೋ ಇಮೇಜ್ ನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ.

ಟ್ವಿಟರ್ ನಲ್ಲಿ ಹಂಚಿಕೊಂಡ ಫೋಟೋದಲ್ಲಿ ಐಶ್ವರ್ಯ ರೈ ಹಾಗೂ ಸಲ್ಮಾನ್ ಖಾನ್ ಫೋಟೋ ಹಾಕಿ opinion poll, ವಿವೇಕ್ –ಐಶ್ವರ್ಯ ಫೋಟೋ ಹಾಕಿ exit poll, ಅಭಿಷೇಕ್- ಐಶ್ವರ್ಯ ಹಾಗೂ ಮಗಳು ಆರಾಧ್ಯ ಫೋಟೋ ಹಾಕಿ result ಎಂದು ಬರೆದುಕೊಂಡಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಈ ಚಿತ್ರಕ್ಕೆ ಅಡಿಬರಹವಾಗಿ ‘ಹಹ..ಕ್ರಿಯೇಟಿವ್! ನೋ ಪಾಲಿಟಿಕ್ಸ್.. ಜಸ್ಟ್ ಲೈಫ್’ ಎಂದು ಬರೆದುಕೊಂಡಿದ್ದಾರೆ.

ಮಾಜಿ ವಿಶ್ವಸುಂದರಿ ನಟಿ ಐಶ್ವರ್ಯ ರೈ ಅವರು ಸಲ್ಮಾನ್ ಖಾನ್ ಹಾಗೂ ವಿವೇಕ್ ಒಬೆರಾಯ್ ಅವರನ್ನು ಒಂದು ಕಾಲದಲ್ಲಿ ಪ್ರೀತಿಸುತ್ತಿದ್ದರು. ಈ ಸಂಬಂಧ ಹಲವಾರು ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡಿತ್ತು. ಆದರೆ ಐಶ್ವರ್ಯ ಅವರು 2007ರಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾದರು. ಈ ದಂಪತಿಗೆ ಆರಾಧ್ಯ ಎಂಬ ಮಗಳಿದ್ದಾಳೆ.