ನೃತ್ಯ ನಿರ್ದೇಶಕಿ ಸರೋಜ್ ಖಾನ್ ಗೆ ಬಾಲಿವುಡ್ ನಿಂದ ಅಂತಿಮ ವಿದಾಯ

ನೃತ್ಯ ನಿರ್ದೇಶಕಿ ಸರೋಜ್ ಖಾನ್ ಗೆ ಬಾಲಿವುಡ್ ನಿಂದ ಅಂತಿಮ ವಿದಾಯ

HSA   ¦    Jul 03, 2020 04:05:12 PM (IST)
ನೃತ್ಯ ನಿರ್ದೇಶಕಿ ಸರೋಜ್ ಖಾನ್ ಗೆ ಬಾಲಿವುಡ್ ನಿಂದ ಅಂತಿಮ ವಿದಾಯ

ಮುಂಬಯಿ: ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ನ ನೃತ್ಯ ನಿರ್ದೇಶಕಿ ಸರೋಜ್ ಖಾನ್ ಅವರು ಶುಕ್ರವಾರ ಮುಂಜಾವಿನ ಸಮಯದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದು, ಬಾಲಿವುಡ್ ಅವರಿಗೆ ಅಂತಿಮ ವಿದಾಯ ಹೇಳಿದೆ.

ಜೂನ್ 20ರಂದು ಸರೋಜ್ ಖಾನ್ ಅವರನ್ನು ಮುಂಬಯಿ ಬಾಂದ್ರಾದಲ್ಲಿರುವ ಗುರು ನಾನಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಇಂದು ಮೃತಪಟ್ಟಿದ್ದಾರೆ.

ಶುಕ್ರವಾರ ಬೆಳಗ್ಗೆ 71ರ ಹರೆಯದ ನೃತ್ಯ ನಿರ್ದೇಶಕಿಯ ಅಂತ್ಯಸಂಸ್ಕಾರವು ಮಲಾಡ್ ನಲ್ಲಿ ನಡೆದಿದೆ. ಅವರು ಮಗಳು ಸುಕೈನಾ ಖಾನ್ ಮತ್ತು ಮಗ ರಾಜು ಖಾನ್ ಅವರನ್ನು ಅಗಲಿದ್ದಾರೆ.

ಬೆಳಗ್ಗೆ ಏಳು ಗಂಟೆಗೆ ಅಂತ್ಯಕ್ರಿಯೆ ನಡೆದಿದೆ ಮತ್ತು ಸಂತಾಪ ಸೂಚಕ ಸಭೆಯು ಮೂರು ದಿನಗಳ ಬಳಿಕ ನಡೆಯಲಿದೆ ಎಂದು ಅವರ ಮಗಳು ತಿಳಿಸಿದ್ದಾರೆ.