5ಭಾಷೆಗಳಲ್ಲಿ ತೆರೆಕಂಡ ಫೈಲ್ವಾನ್: ಜನರಿಂದ ಉತ್ತಮ ರೆಸ್ಪಾನ್ಸ್

5ಭಾಷೆಗಳಲ್ಲಿ ತೆರೆಕಂಡ ಫೈಲ್ವಾನ್: ಜನರಿಂದ ಉತ್ತಮ ರೆಸ್ಪಾನ್ಸ್

YK   ¦    Sep 12, 2019 03:33:01 PM (IST)
 5ಭಾಷೆಗಳಲ್ಲಿ ತೆರೆಕಂಡ ಫೈಲ್ವಾನ್: ಜನರಿಂದ ಉತ್ತಮ ರೆಸ್ಪಾನ್ಸ್

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ಫೈಲ್ವಾನ್ ಇಂದು ಐದು ಭಾಷೆಗಳಲ್ಲಿ ಬಿಡುಗಡೆಗೊಂಡಿದ್ದು, ಜನರಿಂದ ಉತ್ತಮ ರೆಸ್ಪಾನ್ಸ್ ಬರುತ್ತಿದೆ.

ಇಂದು ಫೈಲ್ವಾನ್ ಚಿತ್ರ 40ಸಾವಿರ ಥಿಯೇಟರ್ ನಲ್ಲಿ ಏಕಕಾಲಕ್ಕೆ ಬಿಡುಗಡೆಗೊಂಡಿತ್ತು.ಈ ಚಿತ್ರಕ್ಕಾಗಿ ಸುದೀಪ್ ವರ್ಷಗಳಿಂದ ವರ್ಕೌಟ್ ಮಾಡಿ ವಿಭಿನ್ನ ಲುಕ್ ನಲ್ಲಿ ತೆರೆಗೆ ಬಂದಿದ್ದರು.

ಸಿನಿಮಾ ಪೋಸ್ಟರ್ ಹಾಗೂ ಟೀಸರ್ ನಿಂದಲೇ ಬಹಳಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಚಿತ್ರಕ್ಕಾಗಿ ತೂಕ ಇಳಿಸಿಕೊಂಡಿರುವ ವಿಚಾರವನ್ನು ಸುದೀಪ್ ಅವರೇ ಟ್ವಿಟರ್ ನಲ್ಲಿ ಬರೆದುಕೊಂಡಿದ್ದರು.

ಚಿತ್ರಕ್ಕೆ ಶುಭವಾಗಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ನಟರು ಹಾಗೂ ನಿರ್ದೇಶಕರು ನಟ ಸುದೀಪ್ ಹಾಗೂ ಚಿತ್ರತಂಡಕ್ಕೆ ಶುಭಕೋರಿದ್ದರು.