ಇದೇ ೧೭ರಂದು ಸರಳವಾಗಿ ರೇವತಿ ಜತೆ ಹಸೆಮಣೆ ಏರಳಿದ್ದಾರೆ ನಿಖಿಲ್ ಕುಮಾರಸ್ವಾಮಿ

ಇದೇ ೧೭ರಂದು ಸರಳವಾಗಿ ರೇವತಿ ಜತೆ ಹಸೆಮಣೆ ಏರಳಿದ್ದಾರೆ ನಿಖಿಲ್ ಕುಮಾರಸ್ವಾಮಿ

YK   ¦    Apr 07, 2020 12:20:46 PM (IST)
ಇದೇ ೧೭ರಂದು ಸರಳವಾಗಿ ರೇವತಿ ಜತೆ ಹಸೆಮಣೆ ಏರಳಿದ್ದಾರೆ ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಏಪ್ರಿಲ್ ೧೭ರಂದು ನಿಖಿಲ್ ಕುಮಾರ್ ಸ್ವಾಮಿ ಮದುವೆ ಸರಳವಾಗಿ ನಡೆಯಲಿದೆ ಎಂದು ಶಾಸಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ವಧು ರೇವತಿ ಮನೆಯಲ್ಲಿ ಕುಟುಂಬದವರ ಸಮ್ಮುಖದಲ್ಲಿ ಸರಳವಾಗಿ ಮದುವೆ ನಡೆಯಲಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರ ಕುಟುಂಬದವರು ಮಾತುಕತೆ ನಡೆಸಿ ಸರಳವಾಗಿ ಮದುವೆ ನಡೆಸಲು ತೀರ್ಮಾನಿಸಲಾಯಿತು. ದೇವೇಗೌಡ ಅವರ ಕುಟುಂಬ ನಿಖಿಲ್ ಮತ್ತು ರೇವತಿ ಮದುವೆಯನ್ನು ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಿತ್ತು.

ಆದರೆ ಇದೀಗ ದೇಶದಲ್ಲಿ ಕಾಡುತ್ತಿರುವ ಭಯಾನಕ ಕೊರೊನಾ ಸೋಂಕಿನಿಂದಾಗಿ ಭಾರತ ಲಾಕ್ ಡೌನ್ ಆಗಿದೆ. ಇದರಿಂದ ಇದೀಗ ದೇವೇಗೌಡ ಕುಟುಂಬ ಮದುವೆಯನ್ನು ರದ್ದು ಮಾಡದೆ ಸರಳವಾಗಿ ನಡೆಸಲು ತೀರ್ಮಾನಿಸಿದೆ.