ರಸ್ತೆ ಅಪಘಾತದಲ್ಲಿ ಹಿರಿಯ ರಂಗಕರ್ಮಿ ಮುದ್ದುಕೃಷ್ಣ ದಂಪತಿ ಸಾವು

ರಸ್ತೆ ಅಪಘಾತದಲ್ಲಿ ಹಿರಿಯ ರಂಗಕರ್ಮಿ ಮುದ್ದುಕೃಷ್ಣ ದಂಪತಿ ಸಾವು

HSA   ¦    Jul 08, 2019 01:41:43 PM (IST)
ರಸ್ತೆ ಅಪಘಾತದಲ್ಲಿ ಹಿರಿಯ ರಂಗಕರ್ಮಿ ಮುದ್ದುಕೃಷ್ಣ ದಂಪತಿ ಸಾವು

ಮೈಸೂರು: ಉತ್ತರ ಪ್ರದೇಶದ ಲಕ್ನೋದಲ್ಲಿ ಭಾನುವಾರ ಸಂಜೆ ವೇಳೆ ನಡೆದ ರಸ್ತೆ ಅಪಘಾತದಲ್ಲಿ ಹಿರಿಯ ರಂಗಕರ್ಮಿ ಮುದ್ದುಕೃಷ್ಣ(65) ಹಾಗೂ ಅವರ ಪತ್ನಿ ಸಿಎಫ್ ಟಿಆರ್ ಐನ ವಿಜ್ಞಾನಿ ಇಂದ್ರಾಣಿ(59) ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಗಳು ಹೇಳಿವೆ. ಇವರ ಪುತ್ರರಿಬ್ಬರು ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಮೈಸೂರಿಗೆ ಪಾರ್ಥಿವ ಶರೀರ ಬಂದ ಬಳಿಕ ಅಂತಿಮ ಸಂಸ್ಕಾರದ ಬಗ್ಗೆ ಚಿಂತಿಸಲಾಗುವುದು ಎಂದು ರಂಗಾಯಣದ ಮಾಜಿ ನಿರ್ದೇಶಕ ಎಚ್. ಜನಾರ್ದನ್ ತಿಳಿಸಿರುವರು.

ಮುದ್ದುಕೃಷ್ಣ ಅವರು ಪರದೆ ಹಿಂದೆ ಕೆಲಸ ಮಾಡಿದವರು. ಇವರು ಸಮುದಾಯ ಚಳವಳಿಯಲ್ಲಿ ಕೂಡ ಭಾಗಿಯಾಗಿದ್ದರು.