ಗಾಯಕಿ ಅನುರಾಧ ಪೌಡ್ವಲ್ ಪುತ್ರ ಕಿಡ್ನಿ ಅನಾರೋಗ್ಯದಿಂದ ಸಾವು

ಗಾಯಕಿ ಅನುರಾಧ ಪೌಡ್ವಲ್ ಪುತ್ರ ಕಿಡ್ನಿ ಅನಾರೋಗ್ಯದಿಂದ ಸಾವು

HSA   ¦    Sep 12, 2020 04:32:01 PM (IST)
ಗಾಯಕಿ ಅನುರಾಧ ಪೌಡ್ವಲ್ ಪುತ್ರ ಕಿಡ್ನಿ ಅನಾರೋಗ್ಯದಿಂದ ಸಾವು

ನವದೆಹಲಿ: ಜನಪ್ರಿಯ ಗಾಯಕಿ ಅನುರಾಧ ಪೌಡ್ವಲ್ ಅವರ ಪುತ್ರ ಆದಿತ್ಯ ಪೌಡ್ವಲ್ ಅವರು ಶನಿವಾರ ಬೆಳಗ್ಗೆ ಕಿಡ್ನಿ ಸಮಸ್ಯೆಯಿಂದಾಗಿ ಮೃತಪಟ್ಟಿದ್ದಾರೆ.

35ರ ಹರೆಯದ ಆದಿತ್ಯಾ ಪೌಡ್ವಲ್ ಅವರು ಸಂಗೀತ ಕ್ಷೇತ್ರದಲ್ಲಿದ್ದು, ಹಲವಾರು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು. ಗಾಯಕ ಮತ್ತು ಸಂಗೀತ ನಿರ್ದೇಶಕ ಶಂಕರ್ ಮಹದೇವನ್, ಸಂಗೀತ ಅದಿತಿ ಸಿಂಗ್ ಅವರು ಸಾವನ್ನು ದೃಢಪಡಿಸಿದ್ದು, ಸಂತಾಪ ಸೂಚಿಸಿರುವರು.