‘ನಿಖಿಲ್ ಎಲ್ಲಿದೀಯಪ್ಪ’ ಚಿತ್ರ ನಿರ್ದೆಶನಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಅಸ್ತು!

‘ನಿಖಿಲ್ ಎಲ್ಲಿದೀಯಪ್ಪ’ ಚಿತ್ರ ನಿರ್ದೆಶನಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಅಸ್ತು!

YK   ¦    May 13, 2019 04:27:08 PM (IST)
‘ನಿಖಿಲ್ ಎಲ್ಲಿದೀಯಪ್ಪ’ ಚಿತ್ರ ನಿರ್ದೆಶನಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಅಸ್ತು!

ಬೆಂಗಳೂರು: ಬಹಳ ಡೀಮಂಡ್ ಗಿಟ್ಟಿಸಿಕೊಂಡ ‘ನಿಖಿಲ್ ಎಲ್ಲಿದೀಯಪ್ಪ’ ಚಿತ್ರದ ಟೈಟಲ್ ನ್ನು ನಿರ್ದೇಶಕ ಗಣೇಶ್ ಎಂಬವರಿಗೆ ನೀಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಚಿತ್ರಕ್ಕೆ ಈ ಟೈಟಲ್ ನ್ನು ಇಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅನುಮತಿ ನೀಡಿದೆ ಎನ್ನಲಾಗಿದೆ.

ಲೋಕಸಭೆ ಚುನಾವಣೆಯ ಮಂಡ್ಯ ಮೈತ್ರಿ ಅಭ್ಯರ್ಥಿಯನ್ನಾಗಿ ನಿಖಿಲ್ ಕುಮಾರಸ್ವಾಮಿಯನ್ನು ಘೋಷಿಸಿದ ಬಳಿಕ ‘ನಿಖಿಲ್ ಎಲ್ಲಿದೀಯಪ್ಪ’ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.

ನಿಖಿಲ್ ಕುಮಾರಸ್ವಾಮಿ ಅವರು ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಪುತ್ರ. ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಘೋಷಣೆಯಾದ ಬಳಿಕ ನಿಖಿಲ್ ಎಲ್ಲಿದೀಯಪ್ಪ ಎಂದು ಕುಮಾರಸ್ವಾಮಿ ಕೂಗುವ ವಿಡಿಯೋ ವೈರಲ್ ಆಗಿತ್ತು. ಟಿಕ್ ಟಾಕ್ ನಲ್ಲಿ ಯುವಕ ಯುವತಿಯರು ಟ್ರೋಲ್ ಮಾಡಿ ಹಾಕುತ್ತಿದ್ದರು.