ಮಿಸ್ ಯೂನಿವರ್ಸ್ ನ ಮೂರನೇ ಸ್ಥಾನವನ್ನು ಪಡೆದುಕೊಂಡ ಉಡುಪಿ ಮಹಿಳೆ

ಮಿಸ್ ಯೂನಿವರ್ಸ್ ನ ಮೂರನೇ ಸ್ಥಾನವನ್ನು ಪಡೆದುಕೊಂಡ ಉಡುಪಿ ಮಹಿಳೆ

Ms   ¦    May 17, 2021 05:55:30 PM (IST)
ಮಿಸ್ ಯೂನಿವರ್ಸ್ ನ ಮೂರನೇ ಸ್ಥಾನವನ್ನು ಪಡೆದುಕೊಂಡ ಉಡುಪಿ ಮಹಿಳೆ

ಫ್ಲೋರಿಡಾ: 69ನೇ ಮಿಸ್ ಯೂನಿವರ್ಸ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡ ಮೆಕ್ಸಿಕೊದ ಆಯಂಡ್ರಿಯಾ ಮೆಝಾ. 

 

ಅಮೆರಿಕಾದ ಫ್ಲೋರಿಡಾದಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆ ಇದಾಗಿದ್ದು, ಇದರಲ್ಲಿ 26ವರ್ಷ ಮಿಸ್ ಮೆಕ್ಸಿಕೋಗೆ ದಕ್ಷಿಣ ಆಫ್ರಿಕಾದ ಮಾಜಿ ಮಿಸ್ ಯೂನಿವರ್ಸ್ ಜೊಜಿಬಿನಿ ತುಂಝಿ ಕಿರೀಟವನ್ನು ತೊಡಿಸಿದರು.

 

ವಿಶ್ವಸುಂದರಿ ಸ್ಪರ್ಧೆಯಲ್ಲಿ ಬ್ರೆಜಿಲ್ ನ ಜೂಲಿಯಾ ಗಾಮಾ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದು, ಪೆರುವಿನ ಜಾನಿಕ್ ಮಸೆಟಾ ಎರಡನೇ ರನ್ನರ್ ಅಪ್ ಆಗಿದ್ದಾರೆ. ಭಾರತವನ್ನು ಪ್ರತಿನಿಧಿಸಿದ್ದ 22 ವರ್ಷದ ಅಡ್ಲೈನ್ ಕ್ವಾಡ್ರಸ್ ಕ್ಯಾಸ್ಟಲಿನೊ ಮೂರನೇ ರನ್ನರ್ ಅಪ್ ಆಗಿ ಆಯ್ಕೆಯಾಗಿದ್ದಾರೆ.

 

 ಮೂರನೇ ರನ್ನರ್ ಅಪ್ ಪ್ರಶಸ್ತಿ ಗಿಟ್ಟಿಸಿಕೊಂಡಿರುವ ಆಕ್ಸೆನ್ ಕ್ಯಾಸ್ಟಲಿನೋ ಉಡುಪಿ ಜಿಲ್ಲೆಯ ಉದ್ಯಾವರದವರು. ಮೂಲತಃ ಉದ್ಯಾವರದ ನಿವಾಸಿಯಾಗಿರುವ ಕ್ಯಾಸ್ಟೆಲಿನೋ ಇತ್ತೀಚೆಗೆ ಊರಿಗೆ ಬಂದಿದ್ದರು . ಮುಂಬೈನಲ್ಲಿ ವಾಸಿಸುತ್ತಿರುವ ಕ್ಯಾಸ್ಟೆಲಿನೋ ರಜೆಯಲ್ಲಿ ಊರಿಗೆ ಭೇಟಿ ನೀಡುತ್ತಿದ್ದಾರೆ . ಕ್ಯಾಸ್ಟೆಲಿನೋ ಸಾಧನೆಗೆ ಉದ್ಯಾವರದ ನಾಗರಿಕರು ಸಂತಸ ವ್ಯಕ್ತಪಡಿಸಿದ್ದಾರೆ .