ಆತ್ಮಹತ್ಯೆಗೆ ಶರಣಾದ ರಘು ದೀಕ್ಷಿತ್ ಎಂದು ಫೇಕ್ ವಿಡಿಯೋ; ಕ್ರಮ ಕೈಗೊಳ್ಳಲು ಮುಂದಾದ ರಘು ದೀಕ್ಷಿತ್

ಆತ್ಮಹತ್ಯೆಗೆ ಶರಣಾದ ರಘು ದೀಕ್ಷಿತ್ ಎಂದು ಫೇಕ್ ವಿಡಿಯೋ; ಕ್ರಮ ಕೈಗೊಳ್ಳಲು ಮುಂದಾದ ರಘು ದೀಕ್ಷಿತ್

MS   ¦    Jan 11, 2021 07:55:19 PM (IST)
ಆತ್ಮಹತ್ಯೆಗೆ ಶರಣಾದ ರಘು ದೀಕ್ಷಿತ್ ಎಂದು ಫೇಕ್ ವಿಡಿಯೋ; ಕ್ರಮ ಕೈಗೊಳ್ಳಲು ಮುಂದಾದ ರಘು ದೀಕ್ಷಿತ್

ಕನ್ನಡದ ಗಾಯಕ ಕಂ ಸಂಗೀತ ಸಂಯೋಜಕ ರಘು ದೀಕ್ಷಿತ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಯೂಟ್ಯೂಬ್ ಚಾನೆಲ್ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮುಂದಾದ ರಘು ದೀಕ್ಷಿತ್.

ತಾವು ಡಿಪ್ರಷನ್‌ಗೆ ಒಳಗಾಗಿದ್ದು, ಆ ನಂತರ ಅದರಿಂದ ಹೊರಬರಲು ಸಾಕಷ್ಟು ಸಮಯ ಬೇಕಾಯಿತು ಎಂದು ಕೆಲ ದಿನಗಳ ಹಿಂದೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ ಹೇಳಿಕೆಯನ್ನು ತಿರುಚಿ ಫೇಕ್ ವಿಡಿಯೋ ಮಾಡಿದ್ದರೆ.

ಈ ಬಗ್ಗೆ ಕೋಪಗೊಂಡಿರುವ ರಘುದಿಕ್ಷಿತ್ ಆ ಯುಟ್ಯೂಬ್ ಚಾನೆಲ್ ವಿರುದ್ಧ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.