ಈ ವಾರ ಫುಲ್‍ಟೈಟ್ ಪ್ಯಾತೆ ಸಿನಿಮಾ ತೆರೆಗೆ      

ಈ ವಾರ ಫುಲ್‍ಟೈಟ್ ಪ್ಯಾತೆ ಸಿನಿಮಾ ತೆರೆಗೆ      

LK   ¦    Jul 11, 2019 09:30:21 AM (IST)
ಈ ವಾರ ಫುಲ್‍ಟೈಟ್ ಪ್ಯಾತೆ ಸಿನಿಮಾ ತೆರೆಗೆ      

ಚನ್ನಪಟ್ಟಣ: ಕುಡಿತಕ್ಕೆ ದಾಸರಾದವರ ಸ್ಥಿತಿ ಹಾಗೂ ಸಮಾಜ ಆತನನ್ನು ಯಾವ ರೀತಿ ನೋಡುತ್ತದೆ ಎಂಬುದರ ಕಲ್ಪನೆಯ ಆಧಾರದ ಮೇಲೆ, ಪ್ರೇಕ್ಷಕರಿಗೆ ಹಾಸ್ಯ, ಸಾಹಸ, ಕೌಟುಂಬಿಕ, ಕುತೂಹಲ, ವಿಡಂಬನೆಯ ಮುಖಾಂತರ ಸಮಾಜಕ್ಕೆ ಆರೋಗ್ಯಕರ ಸಂದೇಶವನ್ನು ನೀಡಲು ಫುಲ್‍ಟೈಟ್ ಪ್ಯಾತೆ ಸಿನಿಮಾ ಈ ವಾರ ತೆರೆ ಕಾಣಲಿದೆ ಎಂದು ಸಹಾಯಕ  ನಿರ್ದೇಶಕ ಶಿವರಾಮನಗರ ತಿಳಿಸಿದರು.

 ಅವರು ನಗರದ ಕೊಲ್ಲಾಪುರದಮ್ಮ ದೇವಾಲಯದ ಆವರಣದಲ್ಲಿ ತೆರದ ವಾಹನದಲ್ಲಿ ಸಿನಿಮಾದ ತುಣುಕು ಪ್ರದರ್ಶನ ಹಾಗೂ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ಮಾತನಾಡಿ, ರೇಷ್ಮೆನಗರಿ ಹಾಗೂ  ಬೊಂಬೆನಗರಿಯ ಕಲಾವಿದರ ಸಮ್ಮಿಲನದಲ್ಲಿ, ಮಂಡ್ಯ ಮಳವಳ್ಳಿಯ ಸುತ್ತ ರಮಣೀಯ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿರುವ ಅಪ್ಪಟ ಗ್ರಾಮೀಣ ಸೊಗಡಿನ ನೈಜತೆಯ ಸಿನಿಮಾವಾಗಿರುವ ಫುಲ್‍ಟೈಟ್  ಪ್ಯಾತೆ ಸಿನಿಮಾ ಇದೇ ಶುಕ್ರವಾರ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ನಗರದ ಶಿವಾನಂದ ಚಿತ್ರಮಂದಿರದಲ್ಲೂ ಕೂಡ ಇದೇ ವೇಳೆ ಬಿಡುಗಡೆಯಾಗಲಿದೆ ಎಂದರು. 

ಸಿನಿಮಾದಲ್ಲಿ ಹೊಸಮುಖಗಳು ಮೇಳೈಸಲಿದ್ದು, ಜನಪ್ರಿಯ ಹಾಸ್ಯನಟ ಬೀರ್‍ದಾರ್ ಹಲವಾರು ಮಂದಿ ಹಾಸ್ಯಕಲಾವಿದರ ಹಾಸ್ಯ ತುಣುಕುಗಳು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿವೆ, ಅಲ್ಲದೆ ಈ ಸಿನಿಮಾದಲ್ಲಿ ಮೂರುಮಂದಿ ನಾಯಕರು, ಎಸ್.ಸಿ.ಜಿ.ಪುಟ್ಟಣ್ಣ, ಶಿವರಾಮನಗರ ಹಾಗೂ ಅಜೆಯ್‍ಕೃಷ್ಣ,  ಚಿತ್ರದ  ನಾಯಕಿಯಾಗಿ ಮಾನಸಗೌಡ ಹಾಗೂ ಖಳನಾಯಕನಾಗಿ ರಾಜು.ಟಿ. ಹಾಗೂ ಆನಂದ್, ಸಾಯಿನಾಗರಾಜು ಸಿನಿಮಾದಲ್ಲಿ ಅಭಿನಯವನ್ನು ನೀಡಿದ್ದಾರೆ.