ಯುಟ್ಯೂಬ್ ನಲ್ಲಿ ದೂಳೆಬ್ಬಿಸುತ್ತಿರುವ 'ಪುಷ್ಪ' ಟೀಸರ್

ಯುಟ್ಯೂಬ್ ನಲ್ಲಿ ದೂಳೆಬ್ಬಿಸುತ್ತಿರುವ 'ಪುಷ್ಪ' ಟೀಸರ್

Jayashree Aryapu   ¦    Apr 11, 2021 11:39:15 AM (IST)
ಯುಟ್ಯೂಬ್ ನಲ್ಲಿ ದೂಳೆಬ್ಬಿಸುತ್ತಿರುವ 'ಪುಷ್ಪ' ಟೀಸರ್

ಹೈದರಾಬಾದ್ : ಅಲ್ಲು ಅರ್ಜುನ್ ಅವರ 38ನೇ ಹುಟ್ಟುಹಬ್ಬದಂದು ಬಿಡಿಗಡೆಯಾದ ಪುಷ್ಪಾ ಚಿತ್ರದ ಟೀಸರ್ ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಈಗಾಗಲೇ 34 ದಶಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳು ಮತ್ತು ಒಂದು ಮಿಲಿಯನ್ ಲೈಕ್ಸ್ ಗಳನ್ನು ಪಡೆದಿದೆ. 80 ಸೆಕೆಂಡುಗಳ ಈ ಕ್ಲಿಪ್ ಯುಟ್ಯೂಬ್ ನಲ್ಲಿ ಮೆರೆಯುತ್ತಿದೆ.

ಪುಷ್ಪಾ ಚಿತ್ರದ ಟೀಸರ್ ಬಿಡುಗಡೆಯಾದ 24 ಗಂಟೆಗಳಲ್ಲಿ ಒಟ್ಟು 25 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದ್ದು, ಈ ಮೂಲಕ ಟಾಲಿವುಡ್ ನಲ್ಲಿ ಹೆಚ್ಚು ವೀಕ್ಷಿಸಿದ ವಿಡಿಯೋ ಎನ್ನಲಾಗಿದೆ.